ಮುಂಬೈ, ಜೂ 26 (DaijiworldNews/DB): ಸತ್ಯಸುಳ್ಳುಗಳ ನಡುವಿನ ಯುದ್ದದಲ್ಲಿ ಸತ್ಯಕ್ಕೆ ಖಂಡಿತವಾಗಿಯೂ ಗೆಲುವು ಸಿಗುತ್ತದೆ. ಆದರೆ ನಮಗೆ ಆಗಿರುವ ದ್ರೋಹ ಮರೆಯುವಂತದ್ದಲ್ಲ ಎಂದು ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಶಿವಸೇನೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಶನಿವಾರ ಮಾತನಾಡಿದ ಅವರು, ದೇಶದ್ರೋಹಿಗಳು ಗೆಲ್ಲಲು ನಾವೆಂದೂ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ನಮ್ಮ ಶಾಸಕರನ್ನು ಹೊರ ರಾಜ್ಯಕ್ಕೆ ಕೊಂಡೊಯ್ದು ಅವರಿಗಾಗಿ ಲಕ್ಷಗಟ್ಟಲೆ ಕರ್ಚು ಮಾಡಲಾಗುತ್ತಿದೆ. ಆದರೆ ಅದೇ ಅಸ್ಸಾಂನಲ್ಲಿ ಪ್ರವಾಹ ಪೀಡಿತ ಜನರಿಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ನಾಚಿಕೆಗೇಡು ಎಂದವರು ಟೀಕಿಸಿದರು.