ಉತ್ತರಾಖಂಡ, ಜೂ 26 (DaijiworldNews/HR): ಉತ್ತರಾಖಂಡದ ರೂರ್ಕಿಯ ಸಿವಿಲ್ ಲೈನ್ ಕೊತ್ವಾಲಿಯಲ್ಲಿ ಲಿಫ್ಟ್ ಕೊಡುವ ನೆಪದಲ್ಲಿ ತಾಯಿ ಮತ್ತು 6 ವರ್ಷದ ಮಗಳ ಮೇಲೆ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರು ತನ್ನ ಮಗಳೊಂದಿಗೆ ತಮ್ಮ ಊರಿಗೆ ಪ್ರಯಾಣಿಸಲು ಬಸ್ಗಾಗಿ ಕಾಯುತ್ತಿದ್ದು, ಈ ವೇಳೆ ಕಾರೊಂದು ಬಂದಿದ್ದು, ಮಹಿಳೆ ಲಿಫ್ಟ್ ಕೇಳಿದಾಗ ತಾಯಿ-ಮಗಳನ್ನು ಕಾರಿಗೆ ಹತ್ತಿಸಿಕೊಂಡಿದ್ದಾರೆ.
ಇನ್ನು ಈ ಪ್ರಯಾಣದ ವೇಳೆ ಕಾರಿನಲ್ಲೇ ಇಬ್ಬರ ಮೇಲೂ ಸಾಮೂಹಿಕ ಅತ್ಯಾಚಾರವೆಸಗಿದ್ದು, ಬಳಿಕ ಆರೋಪಿಗಳು ಗಂಗ್ನಹಾರ್ ದಡದಲ್ಲಿ ಸಂತ್ರಸ್ತೆಯರಿಬ್ಬರನ್ನೂ ಎಸೆದು ಪರಾರಿಯಾಗಿದ್ದಾರೆ.
ಮಹಿಳೆ ರಕ್ತಸಿಕ್ತ ಸ್ಥಿತಿಯಲ್ಲಿ ಮಗಳೊಂದಿಗೆ ಪೊಲೀಸ್ ಠಾಣೆಗೆ ಬಂದು ತನಗೆ ನಡೆದ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ಸಾಮೂಹಿಕ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.