ಮುಂಬೈ, ಜೂ 25 (DaijiworldNews/HR): ಏಕನಾಥ್ ಶಿಂಧೆ ಪಾಳಯದಲ್ಲಿರುವ ಬಂಡಾಯ ಸಚಿವರು 24 ಗಂಟೆಗಳಲ್ಲಿ ತಮ್ಮ ಹುದ್ದೆಗಳನ್ನ ಕಳೆದುಕೊಳ್ಳಲಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಗುಲಾಬ್ರಾವ್ ಪಾಟೀಲ್, ದಾದಾ ಭೂಸೆ, ಸಂದೀಪನ್ ಭುಮ್ರೆ ಅವರಂತಹ ಸಚಿವರನ್ನ ಉದ್ಧವ್ ಠಾಕ್ರೆ ಅವರು ಕ್ಯಾಬಿನೆಟ್ ಸಚಿವರನ್ನಾಗಿ ಮಾಡಿದ ನಿಷ್ಠಾವಂತ ಶಿವಸೇನಾ ಕಾರ್ಯಕರ್ತರು ಎಂದು ಪರಿಗಣಿಸಲಾಗಿದೆ. ಪಕ್ಷವು ಅವರಿಗೆ ಸಾಕಷ್ಟು ನೀಡಿದೆ. ಆದರೆ ಅವರು ತಪ್ಪು ದಾರಿ ಹಿಡಿದಿದ್ದು, 24 ಗಂಟೆಗಳಲ್ಲಿ ತಮ್ಮ ಹುದ್ದೆಗಳನ್ನುಕಳೆದುಕೊಳ್ಳುತ್ತಾರೆ ಎಂದರು.
ಇದಕ್ಕೂ ಮೊದಲು ಸಚಿವ ಶಿಂಧೆ ನೇತೃತ್ವದ ಬಂಡಾಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೇನಾ ಅಧ್ಯಕ್ಷ ಮತ್ತು ರಾಜ್ಯ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಅಧಿಕಾರ ನೀಡಿದೆ.