ಜಮ್ಮು ಮತ್ತು ಕಾಶ್ಮೀರ, ಜೂ 25 (DaijiworldNews/HR): ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್ಕೌಂಟರ್ ಪ್ರಾರಂಭವಾಗಿದ್ದು, 2-3 ಭಯೋತ್ಪಾದಕರನ್ನ ಭದ್ರತಾ ಪಡೆಗಳು ಸುತ್ತುವರೆದಿರುವ ಘಟನೆ ಶೋಪಿಯಾನ್ನ ಹೆಫ್ ಶಿರ್ಮಾಲ್ನಲ್ಲಿ ನಡೆದಿದ್ದು, ಉಗ್ರರಲ್ಲಿ ನಡುಕ ಉಂಟಾಗಿದೆ.
ಗುಪ್ತಚರ ಆಧಾರದ ಮೇಲೆ, ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಗಾಗಿ ಪ್ರದೇಶವನ್ನು ತಲುಪಿದ್ದು, ಉಗ್ರರ ಗುಂಡಿನ ದಾಳಿ ಬಳಿಕ ಎನ್ಕೌಂಟರ್ ಆರಂಭವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು 2-3 ಭಯೋತ್ಪಾದಕರನ್ನ ಭದ್ರತಾ ಪಡೆಗಳು ಸುತ್ತುವರೆದಿದ್ದು, ಉಗ್ರರಲ್ಲಿ ನಡುಕ ಉಂಟಾಗಿದೆ ಎನ್ನಲಾಗಿದೆ.