ತುಮಕೂರು, ಜೂ 25 (DaijiworldNews/HR): ಬರಗೂರು ರಾಮಚಂದ್ರಪ್ಪ ಸಮಿತಿಯಲ್ಲಿನ ಪಠ್ಯಪುಸ್ತಕದ 179 ಪುಟಗಳಲ್ಲಿ 150 ತಪ್ಪುಗಳು ಆಗಿದ್ದು, ನಮ್ಮ ಅವಧಿಯಲ್ಲಿ 17 ತಪ್ಪುಗಲಾಗಿದ್ದು, ಎಲ್ಲವನ್ನೂ ಸರಿಪಡೆಸಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಡಿಕೆಶಿ ಪಠ್ಯಪುಸ್ತಕ ಹರಿದು ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ, ಡಿಕೆಶಿ ಅವರು ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ. ಅದಕ್ಕೆ ನಾವೇನೂ ಮಾಡಲು ಆಗಲ್ಲ ಎಂದಿದ್ದಾರೆ.
ಇನ್ನು ಈಗಾಗಲೇ ಶೇಕಡಾ 75ರಷ್ಟು ವಿದ್ಯಾರ್ಥಿಗಳಿಗೆ ಪುಸ್ತಕ ಹಂಚಿಕೆ ಮಾಡಲಾಗಿದ್ದು, ಬರಗೂರು ರಾಮಚಂದ್ರಪ್ಪ ಸಮಿತಿಯಲ್ಲಿ ಸಾಕಷ್ಟು ತಪ್ಪುಗಳಿವೆ. ನಮ್ಮ ಅವಧಿಯಲ್ಲಿ 17 ತಪ್ಪುಗಲಾಗಿದ್ದು, ಎಲ್ಲವನ್ನೂ ಸರಿಪಡೆಸಿದ್ದೇವೆ ಎಂದು ಹೇಳಿದ್ದಾರೆ.