ಕಲಬುರಗಿ, ಜೂ 25 (DaijiworldNews/HR): ಮಹಾರಾಷ್ಟ್ರ ಸರ್ಕಾರವನ್ನು ಬೀಳಿಸಲು ಬಿಜೆಪಿ ಸಂಚು ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷಕ್ಕೆ ಬಹುಮತ ಬರದೇ ಇದ್ದ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವುದು ಸಾಮಾನ್ಯ. ಇದಕ್ಕೆ ದೇಶದ ಸಂವಿಧಾನದಲ್ಲೂ ಕೂಡ ಅವಕಾಶ ಇದ್ದುದರಿಂದ ಎನ್ಸಿಪಿ ಮತ್ತು ಶಿವಸೇನೆ ಹಾಗೂ ಕಾಂಗ್ರೆಸ್ ಸೇರಿ ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಮಾಡಿದ್ದವು. ಆದರೆ ಮೂರೂ ಪಕ್ಷಗಳ ಮಧ್ಯೆ ಆಂತರಿಕ ಬಿಕ್ಕಟ್ಟಿಗೆ ಪ್ರಚೋದನೆ ನೀಡಿ ಸರ್ಕಾರವನ್ನು ಬೀಳಿಸಲು ಬಿಜೆಪಿ ವ್ಯವಸ್ಥಿತವಾದ ಸಂಚು ಮಾಡಿದೆ ಎಂದರು.
ಇನನು ಈಗಾಗಲೇ ಕರ್ನಾಟಕದಲ್ಲಿ ಇದನ್ನೇ ಮಾಡಿದ್ದ ಬಿಜೆಪಿ, ಮಹಾರಾಷ್ಟ್ರದಲ್ಲೂ ಮತ್ತು ಇತರ ರಾಜ್ಯಗಳಲ್ಲೂ ವ್ಯವಸ್ಥಿತವಾಗಿ ಸಂಚಿನ ಮೂಲಕ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ ಎಂದು ಆರೋಪಿಸಿದ್ದಾರೆ.