ನವದೆಹಲಿ, ಜೂ 24 (DaijiworldNews/DB): ಇತ್ತೀಚೆಗಷ್ಟೇ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದ ಸ್ವದೇಶಿ ನಿರ್ಮಿತ ಯುದ್ದವಾಹನವನ್ನು ಲಡಾಖ್ನ ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ.
ಉತ್ತರ ಭಾಗದ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಶುಕ್ರವಾರ ಈ ವಾಹನವನ್ನು ಸೇವೆಗೆ ನಿಯೋಜಿಸಿ, ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಿದರು. ಗುಡ್ಡಗಾಡು ಪ್ರದೇಶದಲ್ಲಿಯೂ ಸುಲಭವಾಗಿ ಚಲಿಸುವ ಸಾಮರ್ಥ್ಯ ಹೊಂದಿರುವ ಈ ವಾಹನವು ಶಸ್ತ್ರಸಜ್ಜಿತವಾಗಿ ರೂಪುಗೊಂಡಿದೆ. ಶತ್ರುಗಳ ಜೊತೆ ಕಾದಾಡಲು ಇದು ಸಂಪೂರ್ಣ ರೀತಿಯಲ್ಲಿ ಸಹಕಾರಿಯಾಗಿ ಭಾರತೀಯ ಸೈನಿಕರ ಜೊತೆಗಿರಲಿದೆ ಎಂದು ವರದಿಯಾಗಿದೆ.
ಈ ವಾಹದಲ್ಲಿ1800 ಮೀಟರ್ ದೂರದವರೆಗೂ ಶತ್ರುಗಳ ಮೇಲೆ ಕಣ್ಣಿಡಬಹುದು. ಈ ವಾಹನದ ಹೆಸರು ಇನ್ಫ್ರಾಂಟ್ರಿ ಪ್ರೊಟೆಕ್ಟೆಡ್ ಮೊಬಿಲಿಟಿ ವೆಹಿಕಲ್ಸ್ (ಐಪಿಎಂವಿಎಸ್) ಎಂಬುದಾಗಿದೆ. ಡಿಆರ್ಡಿಒ ಹಾಗೂ ಟಾಟಾ ಸಂಸ್ಥೆ ಸಹಯೋಗದೊಂದಿಗೆ ವಾಹನ ತಯಾರಾಗಿದೆ.