ಬೆಂಗಳೂರು,ಜೂ 24 (DaijiworldNews/HR): ಆರ್ ಅಶೋಕ್ ಅವರೇ ಈ ಫೋಟೋ ನೆನಪಿದ್ಯಾ? ಇದು ಟಿಪ್ಪುವಿನ ಪೋಷಕು ಧರಿಸಿ ಆಗಿನ ಸಿಎಂ ಶೆಟ್ಟರ್ ಜೊತೆಗೆ ಪೋಸ್ ನೀಡಿದವರು ತಾವೇ ಅಲ್ಲವೇ? ಆಗ ಮೈಮೇಲಷ್ಟೆಯಲ್ಲ, ತಲೆ ಮೇಲೆ ಹೊತ್ತು ಮೆರೆಸಿದ್ದನ್ನ ಮರೆತಿದ್ದೀರಾ? ಇತಿಹಾಸ ದಾಖಲೆ ಸಮೇತ ಸುಳ್ಳನ್ನ ಬೆತ್ತಲೆ ಮಾಡಿ ಬಿಡುತ್ತೆ ಹುಷಾರ್ ಎಂದು ಪರಿಷತ್ ವಿಪಕ್ಷ ನಾಯಕರಾದ ಬಿ. ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಟಿಪ್ಪು ಸುಲ್ತಾನ್ ಎಂದರೆ ಸಿದ್ದರಾಮಯ್ಯನವರಿಗೆ ಮೈಮೇಲೆ ಬಂದವರಂತೆ ಆಡುತ್ತಾರೆ ಎಂದು ಆರ್.ಅಶೋಕ್ ಅವರು ನೀಡಿರುವ ಹೇಳಿಕೆಗೆ ಹರಿಪ್ರಸಾದ್ ತಿರುಗೇಟು ನೀಡಿರುವ ಹರಿಪ್ರಸಾದ್, ಟಿಪ್ಪು ಸುಲ್ತಾನ್ ನಮ್ಮ ಮೈಮೇಲಷ್ಟೇ ಅಲ್ಲ, ಬಿಜೆಪಿ ಹಾಗೂ ಶೆಟ್ಟರ್, ಕಾರಜೋಳರ ಎದೆಯಲ್ಲಿದ್ದಾರೆ ಅನುಮಾನವಿದ್ದರೆ ಎದೆ ಬಗೆದು ನೋಡಿ ಎಂದಿದ್ದಾರೆ.
ಇನ್ನು ಪಠ್ಯ ಪುಸ್ತಕದಲ್ಲಿ ಉದ್ದೇಶಪೂರ್ವಕವಾಗಿ ನಾಡಿನ ಸಾಂಸ್ಕೃತಿಕ ನಾಯಕರಿಗೆ ಬಿಜೆಪಿ ಸರ್ಕಾರ ಮಾಡಿರುವ ಘನಘೋರ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದೆ. ಟಿಪ್ಪು ಸುಲ್ತಾನರ ವಿಷಯವನ್ನ ಮತ್ತೆ ಮುನ್ನಲೆಗೆ ತಂದು ವಿಷಯವನ್ನ ಡೈವರ್ಟ್ ಮಾಡಲು ಸಚಿವ ಆರ್ ಅಶೋಕ ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.