ಬೆಂಗಳೂರು, ಜೂ 24 (DaijiworldNews/MS): ಸರ್ಕಾರಗಳನ್ನು ಉರುಳಿಸುವುದು ಬಿಜೆಪಿಗೆ ಹವ್ಯಾಸವಾಗಿ ಬಿಟ್ಟಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, " ಕರ್ನಾಟಕ, ಗೋವಾ , ಮಣಿಪುರ, ಮಧ್ಯಪ್ರದೇಶ ಅರುಣಾಚಲಪ್ರದೇಶ, ಪುದುಚೇರಿ ಸೇರಿದಂತೆ ವಿವಿಧೆಡೆ ಇಂಥದ್ದೇ ಕೆಲಸ ಮಾಡಿದೆ. ಶಾಸಕರ ಖರೀದಿ, ಬೆದರಿಕೆ ತಂತ್ರ ಗಳನ್ನುಅನುಸರಿಸುವುದು, ಪ್ರಜಾಸತ್ತಾತ್ಮಕ ಮತ್ತು ಸಂವಿಧಾನ ಮೌಲ್ಯಗಳನ್ನು ಉಲ್ಲಂಘಿಸಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಸೇನೆಯ ಬಂಡಾಯ ಶಾಸಕರ ಬಣದ ನೇತೃತ್ವ ವಹಿಸಿರುವ ಏಕನಾಥ್ ಶಿಂಧೆ ತಮಗೆ 40ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡು , ಇದಕ್ಕೆ ಸಾಕ್ಷಿಯಾಗಿ ಹೊಟೇಲ್ ನಲ್ಲಿ ತಂಗಿರುವ ಶಾಸಕರ ಪೋಟೋ ಬಿಡುಗಡೆಗೊಳಿಸಿದ್ದಾರೆ. ಹೀಗಾಗಿ ಮಹಾರಾಷ್ಟ್ರದ ಆಡಳಿತಾರೂಢ ಮಹಾವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ಅಸ್ತಿತ್ವವೇ ಬುಡಸಮೇತ ಅಲ್ಲಾಡಿದಂತಾಗಿದೆ
ಈ ಬೆಳವಣಿಗೆಗೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎನ್ಸಿಪಿ ನಾಯಕರು ಬಿಜೆಪಿಯೇ ಕಾರಣ ಎಂದು ಆರೋಪಿಸುತ್ತಿದ್ದು, ಬಿಜೆಪಿ ಮಾತ್ರ ಈ ವಿವಾದದಿಂದ ಅಧಿಕೃತವಾಗಿ ಅಂತರ ಕಾಯ್ದುಕೊಂಡಿದೆ.