ಸಿಲ್ಚಾರ್, ಜೂ 24 (DaijiworldNews/HR): ಅಸ್ಸಾಂನ ಹಲವು ಜಿಲ್ಲೆಗಳು ಮತ್ತು ಪ್ರದೇಶಗಳು ಪ್ರವಾಹದಲ್ಲಿ ಮುಳುಗಿದ್ದು, ಈ ಸಮಯದಲ್ಲಿ ಅಸ್ಸಾಂನ ಸಿಲ್ಚಾರ್ನಲ್ಲಿ ತಂದೆಯೊಬ್ಬರು ತನ್ನ ನವಜಾತ ಮಗುವನ್ನು ಎತ್ತುಕೊಂಡು ಪ್ರವಾಹದ ನೀರಿನ ಮೂಲಕ ಹಾದುಹೋಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ರಸ್ತೆಗಳು ಹಲವಾರು ಅಡಿಗಳವರೆಗೆ ನೀರಿನಿಂದ ತುಂಬಿದ್ದು, ಅಲ್ಲಿ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಇದರಲ್ಲಿ ತಂದೆ ಬುಟ್ಟಿಯಲ್ಲಿ ತನ್ನ ಪುಟ್ಟ ಮಗುವನ್ನು ಇಟ್ಟುಕೊಂಡು ಪ್ರವಾಹದ ನೀರನ್ನು ದಾಟುತ್ತಿರುವುದನ್ನು ಕಾಣತ್ತಿದ್ದು, ಈ ವಿಡಿಯೋ ನೋಡಿದ ಜನರು ಶ್ರೀಕೃಷ್ಣನನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಇನ್ನು ತೀವ್ರ ಪ್ರವಾಹದ ನಡುವೆಯೂ ತಂದೆ ತನ್ನ ಮಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ನಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.