ಬೆಳಗಾವಿ,ಜೂ 24 (DaijiworldNews/MS): ದೇವರ ತೀರ್ಥ ಸೇವಿಸುವ ವೇಳೆ ಆಕಸ್ಮಿಕವಾಗಿ ಕೃಷ್ಣನ ವಿಗ್ರಹವನ್ನೇ ನುಂಗಿ ಬಳಿಕ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
45 ವರ್ಷದ ನಿತ್ಯ ಮನೆಯಲ್ಲಿ ಪೂಜೆ ಮಾಡಿ, ದೇವರ ತೀರ್ಥ ಸೇವನೆ ಮಾಡುತ್ತಿದ್ದರು. ಎಂದಿನಂತೆ ಪೂಜೆ ನೆರವೇರಿಸಿದ ಅವರು ಆಕಸ್ಮಿಕವಾಗಿ ತೀರ್ಥ ಕುಡಿಯೋ ಸಂದರ್ಭದಲ್ಲಿ 50 ಗ್ರಾಂ ತೂಕದ ವಿಗ್ರಹ ಕೂಡ ನುಂಗಿ ಬಿಟ್ಟಿದ್ದಾರೆ. ಆದರೆ ಇದು ಆಗ ಗಮನಕ್ಕೆ ಬಂದಿರಲಿಲ್ಲ. ಆದರೆ ಬಳಿಕ ಗಂಟಲು ನೋವು ಮತ್ತು ಗಂಟಲು ಊತ ಉಂಟಾಗಿ ವೈದ್ಯರನ್ನು ಸಂಪರ್ಕಿಸಿದ್ದಾರೆ. ಎಕ್ಸ್ ರೇ ಪರಿಶೀಲಿಸಿದಾಗ ವಿಗ್ರಹ ಗಂಟಲಲ್ಲಿ ಸಿಲುಕಿರುವುದು ಕಂಡುಬಂದಿದೆ.
ಬಳಿಕ ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೃಷ್ಣ ವಿಗ್ರಹದ ಎಡಗಾಲು ವ್ಯಕ್ತಿಯ ಅಹಾರನಾಳದಲ್ಲಿ ಸಿಲುಕಿರುವುದು ಪತ್ತೆಯಾಗಿದ್ದು, . ವೈದ್ಯರು ಅನ್ನ ನಾಳದಲ್ಲಿ ಸಿಲುಕಿದ್ದಂತ ವಿಗ್ರಹವನ್ನು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮೂಲಕ, ಹೊರ ತೆಗೆದಿದ್ದಾರೆ. ಕೃಷ್ಣ ವಿಗ್ರಹದ ಎಡಗಾಲು ವ್ಯಕ್ತಿಯ ಅಹಾರನಾಳದಲ್ಲಿ ಸಿಲುಕಿರುವುದು ಪತ್ತೆಯಾಗಿತ್ತು. ಈ ಮೂಲಕ ತೀರ್ಥದ ಜೊತೆಗೆ ಕೃಷ್ಣನ ವಿಗ್ರಹವನ್ನು ನುಂಗಿದ ವ್ಯಕ್ತಿಯನ್ನು ಸಾವಿನ ದವಡೆಯಿಂದ ಬಚಾವ್ ಮಾಡಿದ್ದಾರೆ.