ತುಮಕೂರು, ಜೂ 23 (DaijiworldNews/HR): ನಾವು ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ ಹೊರತಾಗಿ ಯಾವ ಆಪರೇಷನ್ ಮಾಡುವುದಿಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾವು ಯಾವ ಆಪರೇಷನ್ ಮಾಡುವುದಿಲ್ಲ, ಜನರ ಆಯ್ಕೆಯ ಮೇಲೆ ಎಲ್ಲಾ ನಿರ್ಧಾರವಾಗಿದೆ. ಜನರ ಮೇಲೆ ನಮಗೆ ವಿಶ್ವಾಸವಿದೆ ಎಂದರು.
ಇನ್ನು 2023ರಲ್ಲಿ ಜನ ನಮ್ಮನ್ನೇ ಆಯ್ಕೆ ಮಾಡುತ್ತಾರೆಂಬ ವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಕರ್ನಾಟಕ ಇಬ್ಭಾಗ ಆಗಲು ಬಿಡುವುದಿಲ್ಲ ಎಂದಿದ್ದಾರೆ.
ಪಠ್ಯಪುಸ್ತಕ ಹಿಂಪಡೆಯುವ ವಿಚಾರದ ಬಗ್ಗೆ ಮಾತನಾಡಿದ ಅವರು, ಇದರಲ್ಲಿ ಹಠ ಮಾಡುವಂತಹದ್ದು ಏನು ಇಲ್ಲ.ಬಸವಣ್ಣನವರು ಯಾರು, ಏನು ಅಂತ ಅವರ ಚಿಂತನೆಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆದಿದ್ದಾರೆ. ಅವರ ಚಿಂತನೆಗಳನ್ನು ಜನಸಮುದಾಯಕ್ಕೆ ತಿಳಿಸಬೇಕು ಎಂದು ಹೇಳಿದ್ದಾರೆ.