ಬೆಂಗಳೂರು, ಜೂ 23 (DaijiworldNews/DB): ಆರ್ಟಿ ನಗರದ ಅಪಾರ್ಟ್ಮೆಂಟ್ವೊಂದರ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಇನೋವಾ ಕಾರಿನ ವೈರ್ಗಳನ್ನು ಇಲಿ ಕಚ್ಚಿ ಹಾಕಿದ ಘಟನೆ ನಡೆದಿದೆ. ಇಲಿ ಕಚ್ಚಿ ಕಾರು ಹಾಳಾಗಿರುವುದಕ್ಕೆ ಕಾರಿನ ಮಾಲಕ ಅಪಾರ್ಟ್ಮೆಂಟ್ ಅಸೋಸಿಯೇಶನ್ಗೆ ಐದು ಲಕ್ಷ ರೂ. ಪರಿಹಾರದ ಬೇಡಿಕೆ ಇಟ್ಟಿದ್ದಾರೆ.
ಆರ್ ಟಿ ನಗರದ ಗಂಗಾನಗರದಲ್ಲಿರುವ ಕಂಫರ್ಟ್ ಎನ್ ಕ್ಲೇವ್ ಅಪಾರ್ಟ್ ಮೆಂಟ್ನಲ್ಲಿ ಘಟನೆ ನಡೆದಿದೆ. ಈ ಅಪಾರ್ಟ್ಮೆಂಟ್ನ ನಿವಾಸಿ ಲಕ್ಷ್ಮೀನಾರಾಯಣ್ ಅವರ ಕಾರಿನ ವೈರ್ಗಳನ್ನು ಇಲಿಗಳು ಕಚ್ಚಿ ತುಂಡರಿಸಿವೆ. ಅಪಾರ್ಟ್ಮೆಂಟ್ ಮುಂಭಾಗ ಕಸ ಹಾಕಿರುವುದೇ ಇಲಿಗಳು ಬರಲು ಕಾರಣ ಎಂದು ಆರೋಪಿಸಿರುವ ಲಕ್ಷ್ಮೀನಾರಾಯಣ್ ಇದಕ್ಕೆ ತನಗೆ ಐದು ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಪರಿಹಾರ ನೀಡುವುದು ಸಾಧ್ಯವಿಲ್ಲ ಎಂದ ಅಪಾರ್ಟ್ಮೆಂಟ್ ಅಸೋಸಿಯೇಶನ್ ಅಧ್ಯಕ್ಷರಿಗೆ ಕಾರು ಮಾಲಕ ಕೊಲೆ ಬೆದರಿಕೆ ಹಾಕಿದ್ದಾನೆ. ಲಕ್ಷ್ಮೀನಾರಾಯಣ ಅವರ ಬೆದರಿಕೆಯಿಂದ ಬೇಸತ್ತಅಪಾರ್ಟ್ಮೆಂಟ್ನ ಇತರ ನಿವಾಸಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಆತ ರಂಪಾಟ ಮಾಡಇರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.