ಮುಂಬೈ, ಜೂ 23 (DaijiworldNews/HR): ಮಹಾರಾಷ್ಟ್ರದಲ್ಲಿ ರಾಜಕೀಯ ತಿಕ್ಕಾಟಗಳು ಮುಂದುವರೆದಿದ್ದು, ಶಿವಸೇನಾದ ಬಂಡಾಯ ನಾಯಕ ಏಕನಾಥ್ ಶಿಂಧೆ ತಮ್ಮೊಂದಿಗಿರುವ 42 ಶಿವಸೇನೆ ಶಾಸಕರ ಫೋಟೋ ಬಿಡುಗಡೆ ಮಾಡಿದ್ದಾರೆ.
ಏಕನಾಥ್ ಶಿಂಧೆ ಅವರು ಶಾಸಕರೊಂದಿಗೆ ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್ನಲ್ಲಿ ತಂಗಿದ್ದು, ಎನ್ಸಿಪಿ ಮತ್ತು ಕಾಂಗ್ರೆಸ್ ಅನ್ನು ಮಹಾ ವಿಕಾಸ್ ಅಘಾಡಿಯಿಂದ ಹೊರಹಾಕಬೇಕು ಎಂದು ಶಿಂಧೆ ಟ್ವೀಟ್ ಮಾಡಿದ್ದಾರೆ.
ಶಿವಸೇನೆಯ ಬಂಡಾಯ ಶಾಸಕರಾದ ಮಹೇಂದ್ರ ಮೋರೆ, ಭರತ್ ಗೋಗ್ವಾಲ್, ಮಹೇಂದ್ರ ದಳವಿ, ಅನಿಲ್ ಬಾಬರ್, ಮಹೇಶ್ ಶಿಂಧೆ, ಶಾಜಿ ಪಾಟೀಲ್, ಶಂಭುರಾಜೆ ದೇಸಾಯಿ, ದಯಾರಾಜ್ ಚೌಗುಲೆ, ರಮೇಶ್ ಬೋರ್ನಾರೆ, ತಾನಾಜಿ ಸಾವಂತ್, ಸಂದೀಪನ್ ಭುಮ್ರೆ, ಅಬ್ದುಲ್ ಸತ್ತಾರ್, ಲೈಟ್ ಸರ್ವೇ, ಬಾಲಾಜಿ ಕಲ್ಯಾಣ್ಕರ್, ಸಂಜಯ್ ಶಿರ್ಸಾತ್, ಪ್ರದೀಪ್ ಜೈಸ್ವಾಲ್, ಸಂಜಯ್ ರೈಮುಲ್ಕರ್, ಸಂಜಯ್ ಗಾಯಕ್ವಾಡ್, ವಿಶ್ವನಾಥ್ ಭೋಯಿರ್, ಶಾಂತಾರಾಮ್ ಪತಾಶ್, ಶ್ರೀನಿವಾಸ್, ಕಿಶೋರಪ್ಪ ಪಾಟೀಲ್, ಪ್ರತಾಪ್ ಸರ್ನಾಯಕ್, ಯಾಮಿನಿ ಜಾಧವ್, ಲತಾ ಸೋನಾವಾನೆ, ಬಾಲಾಜಿ ಕಿನಿಕ್ಕರ್, ಗುಲಾಬ್ರಾವ್ ಪಾಟೀಲ್, ಯೋಗೇಶ್ ಕದಂ, ದೀಪಕ್ ಕೇಸರ್ಕರ್, ಮಂಗೇಶ್ ಕುಡಾಲ್ಕರ್ ಇವರ ಪೋಟೊವನ್ನು ಏಕನಾಥ್ ಶಿಂಧೆ ಹಂಚಿಕೊಂಡಿದ್ದಾರೆ.