ಬೆಂಗಳೂರು, ಜೂ 23 (DaijiworldNews/HR): ಹಿಂದಿನ ಸರ್ಕಾರವು ಕೆಲವು ಪಠ್ಯಗಳನ್ನು ತೆಗೆದು ಹಾಕಿದೆ. ಇವರಿಗೆ ರಾಮ, ಈಶ್ವರ ಹೆಸರು ಕೇಳಲು ಇಷ್ಟವಿರಲ್ಲ. ಹಿಂದೆ ಅವರಿಗೆ ಬೇಕಾದಂತೆ ಪಠ್ಯ ಪರಿಷ್ಕರಣೆ ಮಾಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತು ಮಾತನಡಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಪಠ್ಯ ಪರಿಷ್ಕರಣೆಯಾದಾಗ ಹಲವು ಪಠ್ಯಗಳನ್ನು ಕೈಬಿಡಲಾಗಿದ್ದು, ಸಿದ್ದರಾಮಯ್ಯ ಅವಧಿ ವೇಳೆ ಯಾರೂ ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇನ್ನು ನಮ್ಮ ಸರ್ಕಾರದ ಪಠ್ಯಪರಿಷ್ಕರಣೆ ಅವಧಿಯಲ್ಲಿ ಕುವೆಂಪು ಅವರ 8 ಪದ್ಯಗಳನ್ನು ಸೇರಿಸಲಾಗಿದ್ದು, ಹಿಡನ್ ಅಜೆಂಟ್ ಇರುವ ಕೆಲ ಸಾಹಿತಿಗಳು ಭ್ರಮೆಯಲ್ಲಿದ್ದಾರೆ. ಹಿಂದುಗಳು ಮಲಗಿದ್ದರೆ ದೇಶ ಮಲಗಿರುತ್ತೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.