ಹೈದರಾಬಾದ್, ಜೂ 23 (DaijiworldNews/HR): ಹೆರಿಗೆಯ ಸಮಯದಲ್ಲಿ ಮಹಿಳೆಯರ ನೋವು ಮತ್ತು ಸಂಕಟವನ್ನು ನಿವಾರಿಸುವ ಸಲುವಾಗಿ ಹೈದರಾಬಾದ್ ಸರ್ಕಾರಿ ಕಿಂಗ್ ಕೋಟಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಹೆರಿಗೆ ಪ್ರಕ್ರಿಯೆಯಲ್ಲಿ ನಗುವ ಅನಿಲ(ಲಾಫಿಂಗ್ ಗ್ಯಾಸ್) ಅಥವಾ ಎಂಟೊನಾಕ್ಸ್ (ನೈಟ್ರಸ್ ಆಕ್ಸೈಡ್ ಮತ್ತು ಆಮ್ಲಜನಕದ ಮಿಶ್ರಣವಾಗಿರುವ ಅನಿಲ) ಬಳಸಲು ಪ್ರಾರಂಭಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕೋಟಿ ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಕಿಂಗ್ ಡಾ.ಜಲಜಾ ವೆರೋನಿಕಾ, ನಗುವ ಅನಿಲ ಇದರ ಸಹಾಯದಿಂದ ಹೆರಿಗೆಯಿಂದ ಬಳಲುತ್ತಿರುವ ಮಹಿಳೆಯರು ಆಮ್ಲಜನಕ ಮತ್ತು ನಗುವ ಅನಿಲದ ಮಿಶ್ರಣವನ್ನು ಉಸಿರಾಡುವ ಮೂಲಕ ತಮ್ಮ ನೋವನ್ನು ಕಡಿಮೆ ಮಾಡಬಹುದು ಎಂದಿದ್ದಾರೆ.
ಇನ್ನು ಹೆರಿಗೆ ಸಮಯದಲ್ಲಿ ಮಹಿಳೆಯರು ನೋವನ್ನು ತಡೆದುಕೊಳ್ಳಲು ಸಾಧ್ಯವಾಗದಿದ್ದರೆ ನಾವು ಅವರಿಗೆ ಎಂಟಾನಾಕ್ಸ್ ಸಿಲಿಂಡರ್ಗೆ ಜೋಡಿಸಲಾದ ಆಮ್ಲಜನಕ ಮುಖವಾಡವನ್ನು ನೀಡುತ್ತೇವೆ. ರೋಗಿಯು ಆಳವಾಗಿ ಉಸಿರಾಡಿದಾಗ, ಅನಿಲವು ಆಕೆಯ ದೇಹಕ್ಕೆ ಹೋಗಲು ಸಹಾಯ ಮಾಡುತ್ತದೆ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಈ ಪ್ರಕ್ರಿಯೆಯನ್ನು ಮೊದಲ ಬಾರಿಗೆ ಮೇ 12 ರಂದು ಬಳಸಲಾಯಿಗಿದ್ದು, ಅಂದಿನಿಂದ ಇಲ್ಲಿಯವರೆಗೆ 13 ಗರ್ಭಿಣಿಯರು ಆಸ್ಪತ್ರೆಯಲ್ಲಿ ಹೆರಿಗೆಯ ಸಮಯದಲ್ಲಿ ಸೂತ್ರವನ್ನು ಬಳಸಿದ್ದಾರೆ.