ಹೊಸದಿಲ್ಲಿ, ಜೂ 23 (DaijiworldNews/DB): ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಪತ್ನಿಯನ್ನು ಚುಂಬಿಸಿದ ವ್ಯಕ್ತಿಯೋರ್ವನಿಗೆ ಅಕ್ಕಪಕ್ಕದಲ್ಲಿದ್ದವರು ನಿಂದಿಸಿ ಥಳಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಸರಯೂ ನದಿಯಲ್ಲಿ ನೂರಾರು ಮಂದಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದರು. ಈ ವೇಳೆ ದಂಪತಿ ಕೂಡಾ ಸ್ನಾನಕ್ಕೆ ಇಳಿದಿದ್ದು, ಸ್ನಾನ ಮಾಡುತ್ತಲೇ ನದಿಯಲ್ಲಿ ಪತ್ನಿಯನ್ನು ಪತಿ ಚುಂಬಿಸುತ್ತಿದ್ದ. ಈ ದೃಶ್ಯವನ್ನು ಗಮನಿಸಿದ ಅಕ್ಕಪಕ್ಕದಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಗಳು ಇದನ್ನು ಆಕ್ಷೇಪಿಸಿ ವ್ಯಕ್ತಿಯನ್ನು ನಿಂದಿಸಿ ಎಳೆದೊಯ್ದಿದ್ದಾರೆ. ಸದ್ಯ ಈ ವೀಡಿಯೋ ಕೂಡಾ ವೈರಲ್ ಆಗಿದ್ದು, ಅಯೋಧ್ಯೆ ಪವಿತ್ರ ಸ್ಥಳ. ಇಲ್ಲಿ ಅಶ್ಲೀಲತೆಯನ್ನು ಸಹಿಸುವುದಿಲ್ಲ ಎಂಬುದಾಗಿ ವ್ಯಕ್ತಿಯೊಬ್ಬ ಹೇಳುತ್ತಿರುವುದೂ ವೈರಲ್ ವೀಡಿಯೋದಲ್ಲಿ ದಾಖಲಾಗಿದೆ.
ಪತಿಯನ್ನು ಇತರರು ಎಳೆದೊಯ್ಯುವಾಗಿ ಪತ್ನಿ ತಡೆಯಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಬಳಿಕ ದಂಪತಿಯನ್ನು ಇತರ ಭಕ್ತಾದಿಗಳು ಹೊರ ಕಳಿಸಿದ್ದು, ಸೂಕ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಅಯೋಧ್ಯೆ ಪೊಲೀಸರು ತಿಳಿಸಿದ್ದಾರೆ.