ಕಾಶ್ಮೀರ, ಜೂ 23 (DaijiworldNews/HR): ಈ ವರ್ಷ ಕಾಶ್ಮೀರ ಕಣಿವೆಯಲ್ಲಿ ಒಟ್ಟು 118 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಶ್ಮೀರ ವಲಯ ಪೊಲೀಸರು, ಪ್ರಸ್ತುತ ವರ್ಷದಲ್ಲಿ ಕಾಶ್ಮೀರದಲ್ಲಿ 32 ವಿದೇಶಿ ಭಯೋತ್ಪಾದಕರು ಸೇರಿದಂತೆ 118 ಭಯೋತ್ಪಾದಕರು ಹತ್ಯೆಮಾಡಲಾಗಿದೆ. ಕಳೆದ ವರ್ಷ 2021 ರಲ್ಲಿ ಇದೇ ಅವಧಿಯಲ್ಲಿ 2 ವಿದೇಶಿ ಭಯೋತ್ಪಾದಕರು ಸೇರಿದಂತೆ ಒಟ್ಟು 55 ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ.
ಇನ್ನು ಈ ವರ್ಷ ಕೊಲ್ಲಲ್ಪಟ್ಟ 118 ಭಯೋತ್ಪಾದಕರಲ್ಲಿ 77 ಮಂದಿ ಪಾಕ್ ಪ್ರಾಯೋಜಿತ ಎಲ್ಇಟಿ ಮತ್ತು 26 ಜೆಎಂ ಸಂಘಟನೆಯಿಂದ ಬಂದವರಾಗಿದ್ದರು ಎಂದು ತಿಳಿಸಿದ್ದಾರೆ.