ಹಾಸನ, ಜೂ 22 (DaijiworldNews/SM): ಇ.ಡಿ ವಿಚಾರಣೆಯ ಹೆಸರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಹುಲ್ ಗಾಂಧಿ ವಿಚಾರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾತನಾಡಲ್ಲ. ಆದರೆ ನಾನು ಹೇಳುವುದೇನೆಂದರೆ, " ಇ.ಡಿ. ಸಂಸ್ಥೆಗಳು ಏಕೆ ರಾಹುಲ್ ಗಾಂಧಿಯನ್ನು ಏಕೆ ಸತತ 5 ದಿನಗಳಿಂದ ವಿಚಾರಣೆಗೆ ಕರೆಯುತ್ತಿದ್ದಾರೆ.
ಕಂಪನಿಗಳು ಯಾವಾಗ ಆರಂಭವಾಗಿದೆ, ಹಣ ಎಲ್ಲಿಂದ ಬಂತು ಎನ್ನುವ ಸಂಪೂರ್ಣವಾಗಿ ದಾಖಲೆಗಳು ಅವರ ಬಳಿಯೇ ಇವೆ. ಆದರೂ ಸತತ ದಿನಗಳಿಂದ ಕಚೇರಿಯಲ್ಲಿ ಕೂರಿಸಿಕೊಂಡು 10 ಗಂಟೆಗಳ ಕಾಲ ಅವರನ್ನು ಏನು ವಿಚಾರಣೆ ಮಾಡುತ್ತಿದ್ದೀರಾ? ಇಲ್ಲಿಯವರೆಗೆ ವಿಚಾರಣೆಯಿಂದ ಎಷ್ಟು ವಿಷಯಗಳನ್ನು ಸಂಗ್ರಹ ಮಾಡಿದ್ದೀರಿ? ಮಾಹಿತಿಗಾಗಿ ಅರ್ಧ ಗಂಟೆ ಅಥವಾ ಒಂದು ಗಂಟೆ ನಡೆಸಬೇಕಾದ ವಿಚಾರಣೆಯನ್ನು ಇಷ್ಟು ದಿನ ತಳ್ಳುತ್ತೀದ್ದೀರಿ ಎಂದು ಕಿಡಿಕಾರಿದ್ದಾರೆ.