ಬೆಂಗಳೂರು, ಜೂ 22 (DaijiworldNews/MS): ಅಗ್ನಿಪಥ್ ಯೋಜನೆ ನಿರುದ್ಯೋಗಿಗಳನ್ನು ತಯಾರು ಮಾಡುವುದೇ ಹೊರತು ಯೋಧರನ್ನಲ್ಲ ಎಂದು ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರುದ್ದ ರಾಜ್ಯ ಕಾಂಗ್ರೆಸ್ ಘಟಕ ಅಸಮಧಾನ ವ್ಯಕ್ತಪಡಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಅಗ್ನಿಪಥ್ ಯೋಜನೆ ನಿರುದ್ಯೋಗಿಗಳನ್ನು ತಯಾರು ಮಾಡುವುದೇ ಹೊರತು ಯೋಧರನ್ನಲ್ಲ ನಿಯಮದ ಅನುಸಾರ 'ನಿವೃತ್ತ ಯೋಧ' ಎಂದು ಪರಿಗಣಿಸಲು ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು, 4 ವರ್ಷ ಸೇವೆ ಮಾಡುವ ಅಗ್ನಿವೀರರಿಗೆ ಆ ಗೌರವವೂ ದೊರಕುವುದಿಲ್ಲ. ವೃತ್ತಿ ಕೌಶಲ್ಯ ನೀಡುತ್ತೇವೆ ಎಂದಿರುವ ಸರ್ಕಾರ ತನ್ನ ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನು ಮುಚ್ಚಿದೆಯೇ? ಎಂದು ಪ್ರಶ್ನಿಸಿದೆ.
ಇನ್ನು ವಿದೇಶದಲ್ಲಿ ಯೋಗ ಉತ್ಸವಕ್ಕಾಗಿ 800 ಕೋಟಿ ಯೋಗ ಆಚರಿಸಲು ಟೀ ಶರ್ಟ್ ಮತ್ತು ಮ್ಯಾಟ್ ಖರೀದಿಗೆ 160 ಕೋಟಿ ಯೋಗ ಪ್ರಚಾರಕ್ಕಾಗಿ ನೂರಾರು ಕೋಟಿ ಖರ್ಚು ನೆನಪಿರಲಿ, ಅಸ್ಸಾಂ ಪ್ರವಾಹಕ್ಕೆ ಕೇಂದ್ರ ಸರ್ಕಾರ ನೀಡಿರುವ ಪರಿಹಾರ ಮೊತ್ತ ಕೇವಲ 324 ಕೋಟಿ. ಇದು ಪ್ರಚಾರದ ಹಿಂದೆ ಬಿದ್ದಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ವೈಖರಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.