ಬೆಂಗಳೂರು, ಜೂ 22 (DaijiworldNews/MS): ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದು ಬಳಿಕ ಪತಿ ಮಹಾಶಯನೇ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಮಾಹಿತಿ ನೀಡಿದ ಘಟನೆ ಯಶವಂತಪುರದ ಮತ್ತಿಕೆರೆ ಬಳಿ ಬುಧವಾರ ಬೆಳಿಗ್ಗೆ ಜೂ. 22 ರಂದು ನಡೆದಿದೆ.
ತಾನೇಶ್ ಆರೋಪಿಯಾಗಿದ್ದು, ಅನಸೂಯ (42) ಹತ್ಯೆಗೀಡಾದ ಪತ್ನಿಯಾಗಿದ್ದಾಳೆ.
ತಾನೇಶ್ ವಿಪರೀತ ಸಾಲ ಮಾಡಿಕೊಂಡಿದ್ದ ಇದಲ್ಲದೆ ಇವರಿಬ್ಬರ ಮಧ್ಯೆ ಕೌಟುಂಬಿಕ ಕಲಹ ನಡೆಯುತ್ತಿತ್ತು. ಇಂದು ಜಗಳ ಮಾಡಿದ್ದ ತಾನೇಶ್ ಪತ್ನಿಯನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ. ಪತ್ನಿ ಅನುಸೂಯಳನ್ನು ಕೊಲೆಗೈದು 13 ವರ್ಷದ ಮಗಳನ್ನು ಹತ್ಯೆ ಮಾಡಲು ಮುಂದಾಗಿದ್ದ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ.
ಪತ್ನಿ ಕೊಲೆ ಮಾಡಿ ಹೆದರಿದ್ದ ತಾನೇಶ್ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ,ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾನೆ.
ಆರೋಪಿ ತಾನೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಯಶವಂತಪುರ ಠಾಣೆಯಲ್ಲಿ ದಾಖಲಾಗಿದೆ.