ಶಿವಮೊಗ್ಗ ಜೂ 22 (DaijiworldNews/DB): ಟೀಕಿಸುವುದನ್ನೇ ಕಾಯಕವಾಗಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ನೀಡಲು ಈ ಪ್ರಪಂಚದಲ್ಲೇ ಔಷಧಿಯಿಲ್ಲ. ಅವರು ಮಾಡುವ ಟೀಕೆಗಳಿಗೆ ಯಾವುದೇ ಬೆಲೆ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ.
ಮೋದಿ ರಾಜ್ಯ ಭೇಟಿ ಬಗ್ಗೆ ಸಿದ್ದರಾಮಯ್ಯ ಟೀಕಿಸಿದ ವಿಚಾರಕ್ಕೆ ಪ್ರತಿಕ್ರಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಹುಚ್ಚು ಹಿಡಿದಿದೆ. ಅದಕ್ಕೆ ವಿಶ್ವದ ಎಲ್ಲೂ ಔಷಧಿ ಸಿಗದು. ಟೀಕಿಸುವುದೇ ಅವರ ಕೆಲಸ ಎಂದರು.
ದೇಶಕ್ಕಾಗಿ ಮೋದಿ ಕೊಡುಗೆ ದೊಡ್ಡದು. ವಿಶ್ವವೇ ಮೆಚ್ಚುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ದೇಶವಾಸಿಗಳಿಗೆ ಕೊರೊನಾ ವ್ಯಾಕ್ಸಿನ್ ಉಚಿತವಾಗಿ ಕೊಟ್ಟಿದ್ದಾರೆ. ಕೊರೊನಾ ಸಂದಭರ್ಧದಲ್ಲಿ ಬಡವರಿಗೆ ಅಕ್ಕಿ ನೀಡಿರುವುದೆಲ್ಲ ಸಿದ್ದರಾಮಯ್ಯನವರಿಗೆ ನೆನಪಿದೆಯೇ ಎಂದವರು ಪ್ರಶ್ನಿಸಿದರು.
ಕಾಂಗ್ರೆಸ್ಗೆ ಜನರೇ ಉತ್ತರ ಕೊಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸಕಾರಕ್ಕೆ ಔಷಧಿ ಸಿಗಲಿದೆ. ರಾಜ್ಯದಲ್ಲಿಯೂ ಮುಂದಿನ ಚುನಾವಣೆಯಲ್ಲಿ ಸಿಗಬಹುದು. ಕಾಂಗ್ರೆಸ್ ಮುಟ್ಟಿದ್ದೆಲ್ಲಾ ನಾಶ ನಿಶ್ಚಿತ ಎಂದವರು ವಾಗ್ದಾಳಿ ನಡೆಸಿದರು.