ನವದೆಹಲಿ, ಜೂ 22 (DaijiworldNews/MS): "ಚೀನಾದ ಯಾವುದೇ ರೀತಿಯ ಉಲ್ಲಂಘನೆಯನ್ನು ಭಾರತ ಸಹಿಸುವುದಿಲ್ಲ" ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸ್ಪಷ್ಟಪಡಿಸಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಗಡಿ ಮಾತುಕತೆ ಮುಂದುವರಿದಿರುವ ನಡುವೆ, ಮಾಧ್ಯಮ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, "ನಾವು ಚೀನಾದೊಂದಿಗೆ ದೀರ್ಘಕಾಲದಿಂದ ಪ್ರಾದೇಶಿಕ ವಿವಾದವನ್ನು ಹೊಂದಿದ್ದೇವೆ. ಆದರೆ ನಾವು ನಮ್ಮ ಉದ್ದೇಶಗಳನ್ನು ಚೀನಾಕ್ಕೆ ಸ್ಪಷ್ಟಪಡಿಸಿದ್ದು, ಯಾವುದೇ ಉಲ್ಲಂಘನೆಯನ್ನು ಸಹಿಸುವುದಿಲ್ಲ ಎಂಬ ಅಂಶಗಳು ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ.
ಭಾರತಕ್ಕೆ ಸಂಬಂಧಿಸಿದಂತೆ ಚೀನಾ ತನ್ನ ವಿಸ್ತರಣಾ ನೀತಿಯನ್ನು ತಡೆಹಿಡಿದಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಜಿತ್ ದೋವಲ್, " 2020 ರ ಗಾಲ್ವಾನ್ ಘರ್ಷಣೆಯ ಎರಡು ವರ್ಷಗಳ ನಂತರ, ಎರಡೂ ದೇಶಗಳು ಬಿಕ್ಕಟ್ಟನ್ನು ಪರಿಹರಿಸಲು ಹಲವಾರು ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿವೆ. ಪೂರ್ವ ಲಡಾಖ್ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಎಲ್ಲಾ ಘರ್ಷಣೆ ಸ್ಥಳಗಳ ಮೇಲೆ ಪರಿಹಾರ ಉದ್ದೇಶವನ್ನು ಸಾಧಿಸಲು ಚೀನಾದೊಂದಿಗೆ ಮುಂದಿನ ಹಿರಿಯ ಕಮಾಂಡರ್-ಮಟ್ಟದ ಸಭೆಯನ್ನು ಎದುರುನೋಡುತ್ತಿದೆ ಎಂದು ನಾನು ಒತ್ತಿ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.