ಬೆಂಗಳೂರು, ಜೂ 21 (DaijiworldNews/HR): ಗೋವಾದ ಸಮುದ್ರ ತಟದಲ್ಲಿ ಸಮ್ಮರ್ ಶಾಟ್ ಹೊಡೆಯುವ ವೇಳೆ ನಟ ದಿಗಂತ್ ಅವರ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿರುವ ಘಟನೆ ನಡೆದಿದೆ.
ನಟ ದಿಗಂತ್ ಅವರು ತಮ್ಮ ಕುಟುಂಬದ ಜತೆ ಗೋವಾ ಪ್ರವಾಸಕ್ಕೆ ತೆರಳಿದ್ದು, ಈ ವೇಳೆ ದಿಗಂತ್ ಸಮ್ಮರ್ ಶಾಟ್ ಹೊಡೆಯುವ ವೇಳೆ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ.
ಇನ್ನು ಮೊದಲಿಗೆ ಗೋವಾದಲ್ಲೆ ದಿಗಂತ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಿಗಂತ್ ಅವರನ್ನು ಕುಟುಂಬಸ್ಥರು ಕರೆತರಲಿದ್ದಾರೆ ಎಂದು ತಿಳಿದು ಬಂದಿದೆ.