ಕೊಪ್ಪಳ, ಜೂ 21 (DaijiworldNews/HR): ಮೋದಿ ಜನಪ್ರೀಯತೆ ಸಹಿಸದೆ ಸಿದ್ದರಾಮಯ್ಯ ಅವರು ಮೂರ್ಖರ ರೀತಿ ಸರಣಿ ಟ್ವೀಟ್ ಮಾಡುತ್ತಿದ್ದು, ಮೋದಿ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ಅಧಿಕಾರಕ್ಕೆ ಬರುವುದಿಲ್ಲ ಎಂಬ ಹತಾಶೆ ಭಾವನೆಯಿಂದ ಕಾಂಗ್ರೆಸ್ ನಾಯಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮಹಾಭಾರತದಲ್ಲಿ ಶ್ರೀ ಕೃಷ್ಣ ಹೇಗೆ ಅವತಾರ ತಾಳಿದ್ದನೋ ಹಾಗೆ ಭಾರತದ ಪ್ರಗತಿಯಲ್ಲಿ ಮೋದಿ ಶ್ರೀಕೃಷ್ಣನ ಅವತಾರದಲ್ಲಿ ಬಂದಿದ್ದಾರೆ ಎಂದರು.
ಇನ್ನು ನವ ಭಾರತ ನಿರ್ಮಾಣಕ್ಕೆ ಮೋದಿ ಬಹಳ ಶ್ರಮಿಸುತ್ತಾರೆ. ನಿಮ್ಮ ಪ್ರಧಾನಿ ಮನ್ ಕೀ ಬಾತ್ ಮಾಡಿದ ಉದಾಹರಣೆ ಇದೆಯಾ? ಎಂದು ಪ್ರಶ್ನಿಸಿರುವ ಅವರು, ಕಾಂಗ್ರೆಸ್ ಪ್ರಧಾನಿ ದೆಹಲಿಗೆ ಸೀಮಿತ. ನಮ್ಮ ಪ್ರಧಾನಿ ಹಳ್ಳಿ ಹಳ್ಳಿಗೂ ತಲುಪಿದ್ದಾರೆ. ಗ್ರಾಪಂ ಸದಸ್ಯನ ಜೊತೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.