ಶ್ರೀನಗರ, ಜೂ 21 (DaijiworldNews/HR): ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಇಂದು ಬೆಳಗ್ಗೆ ಎರಡು ಪ್ರತ್ಯೇಕ ಎನ್ಕೌಂಟರ್ಗಳು ನಡೆದಿದ್ದು, ಪುಲ್ವಾಮಾದ ತುಜ್ಜನ್ ಪ್ರದೇಶ ಮತ್ತು ಸೋಪೋರ್ನ ತುಲಿಬಲ್ ಪ್ರದೇಶದಲ್ಲಿ ಸೋಪೋರ್ನಲ್ಲಿ ಓರ್ವ ಉಗ್ರನನನ್ನು ಭಾರತೀಯ ಸೇನಾಪಡೆ ಸದೆಬಡೆದಿದೆ.
ಸೋಪೋರ್ನ ತುಲಿಬಲ್ ಗ್ರಾಮದಲ್ಲಿ ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದು, ಈ ವೇಲೆ ಓರ್ವ ಉಗ್ರನನನ್ನು ಹೊಡೆದುರುಳಿಸಲಾಗಿದೆ.
ಇನ್ನು ಎರಡೂ ಸ್ಥಳಗಳಲ್ಲಿ ಕಾರ್ಯಾಚರಣೆಗಳು ಮುಂದುವರೆದಿದೆ ಎಂದು ಜಮ್ಮು ಕಾಶ್ಮೀರ ಪೊಳಿಸರು ತಿಳಿಸಿದ್ದಾರೆ.