ಮೈಸೂರು, ಜೂ 21 (DaijiworldNews/HR): ರೋಗ ಮುಕ್ತಿಗಾಗಿ ಯೋಗಾಸನವೇ ಆಧಾರವಾಗಿದೆ. ಯೋಗ ದಿನದ ವಿಶ್ವಾಸವೇ ನಮ್ಮ ಬದುಕಿಗೂ ಪ್ರೇರಣೆಯಾಗಿದ್ದು, ಯೋಗದಿಂದ ಎಲ್ಲರಿಗೂ ಶಾಂತಿ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೈಸೂರು ಅರಮನೆ ಮೈದಾನದಲ್ಲಿ 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಶುಭಾಶಯ ಕೋರಿದ್ದು, ಯೋಗ ದಿನದ ವಿಶ್ವಾಸವೇ ನಮ್ಮ ಬದುಕಿಗೂ ಪ್ರೇರಣೆ, ಮಾನವೀಯತೆಗಾಗಿ ವಿಶ್ವದ ಎಲ್ಲೆಡಯಲ್ಲೂ ಯೋಗ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಯೋಗದಿಂದ ಎಲ್ಲರಿಗೂ ಶಾಂತಿ ಸಿಗಲಿದೆ ಎಂದರು.
ಇನ್ನು ವಿಶ್ವ, ದೇಶದ ಶಾಂತಿಗಾಗಿ ಯೋಗಾಭ್ಯಸ ನಡೆಸಲಾಗುತ್ತಿದೆ. ಮಾನವೀಯತೆಗಾಗಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗದಿಂದ ಇಡೀ ವಿಶ್ವವೇ ಒಗ್ಗೂಡುತ್ತಿದೆ. ಅಂತಾರಾಷ್ಟ್ರಿಯ ಮಟ್ಟದಲ್ಲಿ ಗಾರ್ಡಿಯನ್ ರಿಂಗ್ ಮೂಲಕ ಯೋಗ ದಿನ ಆಚರಣೆ ಮಾಡಲಾಗುತ್ತಿದೆ. ನಮ್ಮ ಜೀವನ ಯೋಗದಿಂದ ಶುರುವಾಗುತ್ತದೆ. ವಿಶ್ವದಲ್ಲಿ ರೋಗ ಮುಕ್ತಿಗಾಗಿ ಯೋಗಾಸನವೇ ಆಧಾರವಾಗಿದೆ ಎಂದಿದ್ದಾರೆ.