ನವದೆಹಲಿ, ಜೂ 20 (DaijiworldNews/MS): ಹಿಮಾಚಲ ಪ್ರದೇಶದ ಪರ್ವಾನೂ ಎಂಬಲ್ಲಿ ಜೂ 20 ರ ಸೋಮವಾರ ಕೇಬಲ್ ಕಾರ್ ನಲ್ಲಿ ಆಕಾಶ ಮಾರ್ಗ ಮಧ್ಯದಲ್ಲಿ ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿದೆ.
ಕೇಬಲ್ ಕಾರ್ , ಟಿಂಬರ್ ಟ್ರಯಲ್ ರೆಸಾರ್ಟ್ ನ ವಿಶೇಷವಾಗಿದ್ದು, 11 ಮಂದಿ ಪ್ರವಾಸಿಗರು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ ಎಂದು ತಿಳಿದುಬಂದಿದೆ.
ಟಿಂಬರ್ ಟ್ರಯಲ್ ರೆಸಾರ್ಟ್ ಸಿಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ಪರ್ವಾನೂ ಅಧಿಕಾರಿ ಚತ್ತಾರ್ ಸಿಂಗ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಕಳೆದ ಎರಡು ಗಂಟೆಗಳಿಂದ ಕೇಬಲ್ ಕಾರ್ ಸಿಲುಕಿಕೊಂಡಿದ್ದು, ಎನ್ ಡಿಆರ್ ಎಫ್ ತಂಡ ಕೂಡಾ ಸ್ಥಳಕ್ಕೆ ಆಗಮಿಸಲಿದೆ ಎಂದು ವರದಿ ಹೇಳಿದೆ
ಕೇಬಲ್ ಕಾರಿನೊಳಗೆ ಸಿಕ್ಕಿಹಾಕಿಕೊಂಡಿರುವ ಜನರ ವೀಡಿಯೊಗಳು ಬಿಡುಗಡೆಗೊಂಡಿದ್ದು, ಈ ವೀಡಿಯೊದ ಮೂಲಕ ಜನರು ತಮ್ಮನ್ನ ರಕ್ಷಿಸಲು ಮನವಿ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿಯು ಒಂದೂವರೆ ಗಂಟೆಗಳ ಕಾಲ ಟ್ರಾಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ಮತ್ತು ಯಾವುದೇ ಸಹಾಯವಿಲ್ಲ ಎಂದು ದೂರಿದ್ದಾರೆ.