ನವದೆಹಲಿ, ಜೂ 20 (DaijiworldNews/MS): ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಡಿಜಿಟಲೀಕರಣಗೊಳ್ಳುತ್ತಿದ್ದು, ಅಂಚೆ ಇಲಾಖೆಯ ಸೇವೆಗಳು ಕೂಡ ವಾಟ್ಸ್ಆ್ಯಪ್ ಮೂಲಕ ಲಭ್ಯವಾಗಲಿದೆ. ವಿಶ್ವದ ಅತಿದೊಡ್ಡ ಅಂಚೆ ವಿತರಣಾ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರವು ಅನೇಕ ಯೋಜನೆಗಳನ್ನು ಕೈಗೊಳ್ಳುತ್ತಿದು ಇದು ಕೂಡಾ ಒಂದಾಗಲಿರುವ ಸಾಧ್ಯತೆ ಇದೆ.
ಪೋಸ್ಟಲ್ ಬ್ಯಾಂಕಿಂಗ್ ಸೇವೆ ಹಾಗೂ ಸಂಬಂಧಿತ ಸೇವೆಗಳಿಗಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಸಂದೇಶ ಕಳುಹಿಸುವ ದೈತ್ಯ ಸಂಸ್ಥೆಯಾದ ವಾಟ್ಸಾಪ್ ನಡುವಿನ ಸಹಯೋಗಕ್ಕಾಗಿ ಕೇಂದ್ರ ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.
ಆರಂಭಿಕ ಹಂತದಲ್ಲಿ ವಾಟ್ಸ್ಆ್ಯಪ್ ಮೂಲಕ ನೀಡಲಾಗುವ ವಿವಿಧ ಸೇವೆಗಳನ್ನು ಪರಿಶೀಲಿಸಲಾಗುತ್ತದೆ. ನಂತರದಲ್ಲಿ, ಆಧಾರ್–ಪಾನ್ ಅಪ್ಡೇಟ್, ಎಲ್ಲ ವಿಧದ ಪೋಸ್ಟಲ್ ಸೇವೆಗಳನ್ನು ಪರಿಶೀಲಿಸಿ, ಮುಂದಿನ ಹಂತದಲ್ಲಿ ಬಳಕೆದಾರರಿಗೆ ಒದಗಿಸಲು ಸಿದ್ಧತೆ ನಡೆದಿದೆ.
"ಮುಂದಿನ 60 ದಿನಗಳಲ್ಲಿ ಐಪಿಪಿಬಿಯ ಸೇವೆಗಳಾದ ಖಾತೆಯಲ್ಲಿನ ಮೊತ್ತ ಪರಿಶೀಲನೆ , ಹೊಸ ಖಾತೆಗಾಗಿ ವಿನಂತಿ, ಪಿನ್ ಬದಲಾಯಿಸುವುದು ಮತ್ತು ಪಾಸ್ವರ್ಡ್ಗಳನ್ನು ಪರೀಕ್ಷಿಸಲಾಗುತ್ತಿದೆ" ಎಂದು ಪೈಲಟ್ ಯೋಜನೆಯನ್ನು ನಡೆಸಲಾಗುವುದು" ಎಂದು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.