ತಮಿಳುನಾಡು, ಜೂ 20 (DaijiworldNews/HR): ತಮಿಳಿನ ಖ್ಯಾತ ನಟ ವಿಜಯ್ ಅವರ ಪಣೈಯೂರುನ ಇಸಿಆರ್ ರಸ್ತೆಯಲ್ಲಿರುವ ಕಚೇರಿಯಲ್ಲಿ ವ್ಯಕ್ತಿಯೊರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಮೃತಪಟ್ಟ ಚಿತ್ರಕಲಾವಿದ ಪ್ರಭಾಕರನ್ ಕಚೇರಿಗೆ ಬಣ್ಣ ಬಳಿಯಲು ಒಂದು ತಿಂಗಳ ಅವಧಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದ. ಕೆಲವು ದಿನಗಳ ಹಿಂದೆ ಪ್ರಭಾಕರನ್ ತನ್ನ ಕುಟುಂಬ ಸದಸ್ಯರನ್ನ ಭೇಟಿಯಾಗಲು ಮನೆಗೆ ಹೋಗಿದ್ದು, ಬುಧವಾರ ರಾತ್ರಿ ಮತ್ತೆ ಹಿಂದಿರುಗಿದ್ದಾನೆ.
ಇನ್ನು ಆತ ಹೆಚ್ಚು ಕುಡಿದಿದ್ದು, ಮೇಲ್ವಿಚಾರಕರ ಬಳಿ ಪರಾಠಾ ತಿನ್ನಲು ನೂರು ರೂಪಾಯಿಗಳನ್ನ ಕೇಳಿದ್ದನಂತೆ. ಅದ್ರಂತೆ, ಮೇಲ್ವಿಚಾರಕರು 100 ರೂ.ಗಳನ್ನು ನೀಡಿದ್ದು, ಮರುದಿನ ಬೆಳಿಗ್ಗೆ 8 ಗಂಟೆಗೆ ಪ್ರಭಾಕರನ್ ಶವವಾಗಿ ಪತ್ತೆಯಾಗಿದ್ದಾನೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.