ಛತ್ತೀಸ್ ಗಢ, ಜೂ 20 (DaijiworldNews/HR): ಪ್ಲಾಟ್ಫಾರ್ಮ್ ಮತ್ತು ರೈಲಿನ ನಡುವಿನ ಅಂತರಕ್ಕೆ ಜಾರುತ್ತಿದ್ದ ಪ್ರಯಾಣಿರೊಬ್ಬರನ್ನು ಸುರಕ್ಷಿತವಾಗಿ ಎಳೆದು ಜೀವ ಉಳಿಸುವ ಮೂಲಕ ರೈಲ್ವೆ ರಕ್ಷಣಾ ಪಡೆಯ ಕಾನ್ಸ್ಟೆಬಲ್ ಪ್ರಮಾಣಿಕತೆ ಮೆರೆದಿದ್ದಾರೆ.
ಸ್ಥಳದಿಂದ ಪಡೆದ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಪ್ರಯಾಣಿಕನು ಚಲಿಸುವ ರೈಲಿನಲ್ಲಿ ಹತ್ತಲು ಪ್ರಯತ್ನಿಸಿದ ನಂತರ ಜಾರಿ ಬೀಳುವುದನ್ನು ಕಾಣುತ್ತದೆ. ನಂತರ ಕಾನ್ಸ್ಟೇಬಲ್ ರೂಪಕ್ ಕುಮಾರ್ ಪ್ರಯಾಣಿಕರಿಗೆ ಸಹಾಯ ಮಾಡಲು ಧಾವಿಸಿದರು ಮತ್ತು ರೈಲು ನಿಲ್ದಾಣದಿಂದ ಹೊರಡುತ್ತಿದ್ದಂತೆ ಅವನನ್ನು ಸುರಕ್ಷಿತವಾಗಿ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಪ್ಲಾಟ್ಫಾರ್ಮ್ ಮತ್ತು ರೈಲಿನ ನಡುವಿನ ಅಂತರಕ್ಕೆ ಜಾರುತ್ತಿದ್ದ ಪ್ರಯಾಣಿರೊಬ್ಬರನ್ನು ಸುರಕ್ಷಿತವಾಗಿ ಎಳೆದು ರಕ್ಷಿಸಿರುವ ವಿಡಿಯೋ ಸಖತ್ ವೈರಲ್ ಆಗಿದ್ದು, ರಕ್ಷಣಾ ಪಡೆಯ ಕಾನ್ಸ್ಟೆಬಲ್ ಅವರಿಗೆ ಪ್ರಶಂಸೆ ವ್ಯಕ್ತವಾಡಿದೆ.