ನವದೆಹಲಿ, ಜೂ 20 (DaijiworldNews/MS): ಕೇಂದ್ರದ ಹೊಸ ಸೇನಾ ನೇಮಕಾತಿ ಯೋಜನೆಯಾದ ಅಗ್ನಿಪಥ್ ಯೋಜನೆಯ ಕುರಿತು ವ್ಯಾಪಕ ಪ್ರತಿಭಟನೆ, ಹಿಂಸಾಚಾರದ ಕುರಿತು ಬೇಸರ ವ್ಯಕ್ತಪಡಿಸಿರುವ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಅವರು 'ತರಬೇತಿ ಪಡೆದ ಮತ್ತು ಸಮರ್ಥ' ಅಗ್ನಿವೀರ್ಗಳನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದಾಗಿ ಇಂದು ಘೋಷಿಸಿದ್ದಾರೆ.
ಅಗ್ನಿಪಥ್ ಯೋಜನೆಯಿಂದ, ಅಗ್ನಿವೀರ್ಗಳು ಶಿಸ್ತು ಮತ್ತು ಕೌಶಲ್ಯಗಳು ಪಡೆದು ಅವರನ್ನು "ಉತ್ತಮ ಉದ್ಯೋಗಿಗಳಾಗಿ" ಮಾಡುತ್ತವೆ ಎಂದು ಇದೇ ವೇಳೇ ಒತ್ತಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರ, 'ಅಗ್ನಿಪಥ್ ಯೋಜನೆ ಘೋಷಿಸಿದ ದಿನದಿಂದ ನಡೆಯುತ್ತಿರುವ ಹಿಂಸಾಚಾರದಿಂದ ನನಗೆ ದುಃಖಿತವಾಗಿದೆ. ಕಳೆದ ವರ್ಷ ಈ ಯೋಜನೆಯನ್ನು ಪ್ರಸ್ತಾಪಿಸಿದಾಗ ನಾನು ಹೇಳಿದ್ದೇನೆ ಮತ್ತು ಪುನರಾವರ್ತನೆ ಮಾಡಿತ್ತಿದ್ದೇನೆ. ಅಗ್ನಿವೀರ್ಗಳ ಶಿಸ್ತು ಮತ್ತು ಕೌಶಲ್ಯಗಳು ಅವರನ್ನು ಉತ್ತಮ ಉದ್ಯೋಗಿಯನ್ನಾಗಿ ಮಾಡುತ್ತದೆ. ಅಂತಹ ತರಬೇತಿ ಪಡೆದ, ಸಮರ್ಥ ಯುವಕರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಮಹೀಂದ್ರಾ ಗ್ರೂಪ್ ಸ್ವಾಗತಿಸುತ್ತದೆ'ಎಂದು ತಿಳಿಸಿದ್ದಾರೆ.
ಮಹೀಂದ್ರಾ ಅವರು ಅಗ್ನಿವೀರ್ಗಳನ್ನು ಯಾವ ಹುದ್ದೆಗಳಲ್ಲಿ ನೇಮಿಸಿಕೊಳ್ಳುತ್ತಾರೆ ಎಂದು ಬಳಕೆದಾರರು ಅವರನ್ನು ಕೇಳಿದಾಗ, ಕೈಗಾರಿಕೋದ್ಯಮಿ ಮಹೀಂದ್ರ ಅವರು ಪ್ರತಿಕ್ರಿಯಿಸಿದ್ದು, "ಕಾರ್ಪೊರೇಟ್ ವಲಯದಲ್ಲಿ ಅಗ್ನಿವೀರ್ಗಳ ಉದ್ಯೋಗಕ್ಕೆ ದೊಡ್ಡ ಸಾಮರ್ಥ್ಯವಿದೆ. ನಾಯಕತ್ವ, ಟೀಮ್ವರ್ಕ್ ಮತ್ತು ದೈಹಿಕ ತರಬೇತಿಯೊಂದಿಗೆ, ಅಗ್ನಿವೀರ್ಗಳು ಉದ್ಯಮಕ್ಕೆ ಮಾರುಕಟ್ಟೆಗೆ ಸಿದ್ಧ ವೃತ್ತಿಪರ ಪರಿಹಾರಗಳನ್ನು ಒದಗಿಸುತ್ತಾರೆ, ಕಾರ್ಯಾಚರಣೆಗಳಿಂದ ಆಡಳಿತ ಮತ್ತು ಪೂರೈಕೆ ಸರಪಳಿ ನಿರ್ವಹಣೆಯವರೆಗೆ ವ್ಯಾಪಕ ಶ್ರೇಣಿಯನ್ನು ಒಳಗೊಂಡಿದೆ.