ನವದೆಹಲಿ, ಜೂ 19 (DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಪ್ರಗತಿ ಮೈದಾನದ ಸುರಂಗದ ಪರಿಶೀಲನೆಯ ವೇಳೆ ಬರಿ ಕೈಗಳಿಂದ ಕಸವನ್ನು ಎತ್ತುವ ಮೂಲಕ ಮತ್ತೆ ಸುದ್ದಿಯಾಗಿದ್ದು, ಸ್ವಚ್ಛ ಭಾರತಕ್ಕೆ ಪ್ರಧಾನಿ ಮತ್ತೆ ಪ್ರೇರಣೆ ನೀಡಿದ್ದಾರೆ.
ನೂತನವಾಗಿ ಇಂದು ಉದ್ಘಾಟನೆಗೊಂಡ ಸುರಂಗ ಮಾರ್ಗವನ್ನು ಪರಿಶೀಲಿಸುತ್ತಿದ್ದ ಮೋದಿ ಅವರು ಎಸೆದಿದ್ದ ಖಾಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಮತ್ತು ಇತರ ಕೆಲವು ವಸ್ತುಗಳನ್ನು ಎತ್ತಿಕೊಂಡಿದ್ದಾರೆ.
ಇನ್ನು ಸುರಂಗ ಯೋಜನೆಯನ್ನು 920 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸಂಪೂರ್ಣವಾಗಿ ಕೇಂದ್ರ ಸರ್ಕಾರದಿಂದ ಹಣವನ್ನು ನೀಡಲಾಗಿದೆ. ಈ ಬಹುನಿರೀಕ್ಷಿತ ಸುರಂಗವು ಭೈರೋನ್ ಮಾರ್ಗ್ಗೆ ಪರ್ಯಾಯ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ.