ಶಿವಮೊಗ್ಗ,ಜೂ 19 (DaijiworldNews/HR): ಕಾಂಗ್ರೆಸ್ ಪಕ್ಷ ಗೂಂಡಾಗಳ ಕೈಗೆ ಸಿಲುಕಿ ದೇಶಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಕಾಂಗ್ರೆಸ್ ನಾಯಕರು ನಿರುದ್ಯೋಗಿ ಯುವಕರನ್ನು ಯಾಕೆ ಹೀಗೆ ದಾರಿ ತಪ್ಪಿಸುತ್ತಿದ್ದೀರಿ ಎಂದು ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರು ಭಯೋತ್ಪಾದಕರ ರೀತಿ ಆಗುತ್ತಾರೆಂದು ಕಾಂಗ್ರೆಸ್ ನವರು ಹೇಳುತ್ತಾರೆ. ನಮ್ಮ ದೇಶದ ಯುವಕರು ಭಯೋತ್ಪಾದಕರಾಗಲ್ಲ. ಕಾಂಗ್ರೆಸ್ ನವರು ಭಯೋತ್ಪಾದಕರಾಗಿ ಮಾಡುತ್ತಿದ್ದಾರೆ ಎಂದರು.
ಇನ್ನು ರಾಹುಲ್ ಗಾಂಧಿ ಇಡಿ ವಿಚಾರಣೆ ವಿಚಾರವಾಗಿ ಮಾತನಾಡಿದ ಅವರು, ಪ್ರತಿಭಟನೆಗೆ ಅವಕಾಶವಿದೆ. ಆದರೆ ರಾಹುಲ್ ಗಾಂಧಿ ವಿಚಾರಣೆಗೆ ಕರೆದರೆ ತಪ್ಪಾ? ರಾಹುಲ್ ಗಾಂಧಿ ಈ ದೇಶದ ಒಬ್ಬ ಪ್ರಜೆ. ಅವರನ್ನು ಇನ್ನು ಬಂಧಿಸಿಲ್ಲ, ಜೈಲಿಗೆ ಕಳುಹಿಸಿಲ್ಲ. ವಿಚಾರಣೆಗೆ ಕರೆದರೆ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.