ಮುಂಬೈ, ಜೂ 19 (DaijiworldNews/DB): ತಂದೆ ಮತ್ತು ಮಗ ಹತ್ತನೇ ತರಗತಿ ಪರೀಕ್ಷೆಯನ್ನು ಒಟ್ಟಿಗೇ ಬರೆದಿದ್ದು, ತಂದೆ ಉತ್ತೀರ್ಣರಾಗಿ ಪುತ್ರ ಅನುತ್ತೀರ್ಣನಾದ ವಿದ್ಯಾಮಾನ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಪುಣೆಯ ಬಾಬಾ ಸಾಹೇಬ್ ಅಂಬೇಡ್ಕರ್ ಡಯಾಸ್ ನಿವಾಸಿ ಭಾಸ್ಕರ್ ವಾಘ್ಮರೆ ( 43) ಹಾಗೂ ಅವರ ಪುತ್ರ ಸಾಹಿಲ್ ಮಹಾರಾಷ್ಟ್ರ ಪರೀಕ್ಷಾ ಮಂಡಳಿ ನಡೆಸಿದ 10ನೇ ತರಗತಿ ಪರೀಕ್ಷೆ ಬರೆದಿದ್ದರು. ಶುಕ್ರವಾರ ಈ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ತಂದೆ ಪಾಸಾದರೆ, ಮಗ ಅನುತ್ತೀರ್ಣನಾಗಿದ್ದ. ಆದರೆ ಮಗನಿಗೆ ಪೂರಕ ಪರೀಕ್ಷೆ ಬರೆಯಲು ಅವಕಾಶವಿದ್ದು, ಆತ ಅದರಲ್ಲಿ ಪಾಸಾಗುವ ವಿಶ್ವಾಸವಿದೆ. ಅವನಿಗೆ ಪೂರಕ ಪರೀಕ್ಷೆ ಬರೆಯಲು ನೆರವಾಗುತ್ತೇನೆ ಎಂದು ತಂದೆ ಭಾಸ್ಕರ್ ಹೇಳಿದ್ದಾರೆ.
ಏಳನೇತರಗತಿಯವರೆಗೆಓದಿದ್ದಭಾಸ್ಕರ್ಕುಟುಂಬದಜವಾಬ್ದಾರಿಹಿನ್ನೆಲೆಯಲ್ಲಿಶಾಲೆತೊರೆದಿದ್ದರು.ಆದರೆಶಿಕ್ಷಣಪಡೆಯುವಅವರಅತೀವಾಸಕ್ತಿಯುಮೂರುದಶಕಗಳಬಳಿಕೆಸೆಸ್ಸೆಲ್ಸಿಪರೀಕ್ಷೆಬರೆಯುವಂತೆಮಾಡಿತ್ತು.ಹೀಗಾಗಿಮಗ ಎಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ ವೇಳೆ ಆತನೊಂದಿಗೆ ತಂದೆಯೂ ಪರೀಕ್ಷೆಗೆ ತಯಾರಿ ನಡೆಸಿದ್ದರು.
ಕೆಲವು ಕೋರ್ಸ್ಗಳನ್ನು ಕಲಿಯಲು ನಾನು ಉತ್ಸಾಹನಾಗಿದ್ದೆ ಮತ್ತು ಅದು ನನಗೆ ಆದಾಯ ಗಳಿಸಲು ಸಹಕಾರಿಯಾಬಹುದು ಎಂದು ಭಾವಿಸಿದ್ದೆ. ಅದಕ್ಕಾಗಿ ಕೋರ್ಸ್ ಕಲಿಯಲು ಎಸೆಸ್ಸೆಲ್ಸಿ ಪಾಸ್ ಮಾಡಬೇಕೆಂಬ ಇಚ್ಚೆ ನನ್ನದಾಗಿತ್ತು ಎಂದಿದ್ದಾರೆ ಭಾಸ್ಕರ್.