ಲಕ್ನೋ, ಜೂ 19 (DaijiworldNews/HR): ಅಗ್ನಿಪಥ್ ನೇಮಕಾತಿ ಯೋಜನೆ ಘೋಷಿದಾಗಿನಿಂದಲೂ ದೇಶದ ಹಲವು ಕಡೆಗಳಲ್ಲಿ ಯೋಜನೆ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಉತ್ತರ ಪ್ರದೇಶದಲ್ಲಿ ಪ್ರತಿಭಟನೆಗೆ ಯುವಕರನ್ನು ಉತ್ತೇಜಿಸುತ್ತಿದ್ದ ಐವರು ನಕಲಿ ಸೇನಾ ಆಕಾಂಕ್ಷಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತರನ್ನು ಸಂದೀಪ್, ಪರಾಗ್ ಪನ್ವಾರ್, ಮೋಹಿತ್, ಮೋಹಿತ್ ಚೌಧರಿ, ಉದಯ್ ಮತ್ತು ಸೌರಭ್ ಕುಮಾರ್ ಎಂದು ಗುರುತಿಸಲಾಗಿದೆ.
ಈ ಐವರು ಹಿಂಚಾಸಾರ ಪ್ರತಿಭಟನೆಗೆ ಪ್ರಚೋದಿಸುತ್ತಿದ್ದ ಎಂಬ ಕಾರಣಕ್ಕೆ ಸಹರಾನ್ ಪುರ ಪೊಲೀಸರು ಬಂಧಿಸಿದ್ದು, ಅವರು ವಿವಿಧ ಪಕ್ಷಗಳ ಪರವಾಗಿ ಅಥವಾ ಇತರ ಸಂಘಟನೆಗಳ ಪರ ಕಾರ್ಯ ನಿರ್ವಹಿಸುವ ಸದಸ್ಯರಾಗಿದ್ದಾರೆ ಎಂದು ವರದಿಯಾಗಿದೆ.