ಹಾಸನ, ಜೂ 19 (DaijiworldNews/HR): ಹಾಸನ ಜಿಲ್ಲೆಯ ಆಲೂರು ಬಳಿ ಕಾರಿನಲ್ಲಿ ಕುಟುಂಬ ಸಮೇತ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತಕ್ಕೀಡಾಗಿ ತಂದೆ ಮತ್ತು ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ತಮಿಳುನಾಡು ಮೂಲದ ಅಂಜನಪ್ಪ (40) ಹಾಗೂ ಮಗ ಕಾರ್ತಿಕ್ (17) ಎಂದು ಗುರುತಿಸಲಾಗಿದೆ.
ಇನ್ನು ಎರಡು ಕಾರಿನಲ್ಲಿ 10 ಜನರು ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದು, ಆಲೂರು ತಾಲೂಕಿನ ಆಲೂರು-ಈಶ್ವರಹಳ್ಳಿ ಕೂಡಿಗೆ ಬಳಿ ಟ್ಯಾಂಕರ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ ಮತ್ತು ಮಗ ಸ್ಥಳದಲೇ ಸಾವನ್ನಪ್ಪಿದ್ದಾರೆ.
ಮತ್ತೋರ್ವ ವ್ಯಕ್ತಿ ರಾಮಚಂದ್ರ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಈ ಬಗ್ಗೆ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.