ಶ್ರೀನಗರ,ಜೂ 18 (DaijiworldNews/HR): ಪೊಲೀಸ್ ಅಧಿಕಾರಿಯೊಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಪಂಪೋರ್ ಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಫಾರುಕ್ ಅಹಮ್ಮದ್ ಮೀರ್ ಅವರ ಮೃತದೇಹ ಭತ್ತದ ಗದ್ದೆಯೊಂದರಲ್ಲಿ ಪತ್ತೆಯಾಗಿದೆ.
ಇನ್ನು ಪಂಪೋರ್ ಪ್ರದೇಶದ ಸಂಬೂರಾದಲ್ಲಿರುವ ಮನೆಯಿಂದ ಫಾರುಕ್ ಅವರನ್ನು ಉಗ್ರರು ಅಪಹರಿಸಿ ಬಳಿಕ ಹತ್ಯೆಗೈದಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.