ನವದೆಹಲಿ, ಜೂ 18 (DaijiworldNews/HR): ಹೆಚ್ಚು ನುರಿತ, ಶಿಸ್ತುಬದ್ಧ ಮತ್ತು ಪ್ರೇರಿತ ಅಗ್ನಿವೀರರನ್ನು ತನ್ನ ವಿವಿಧ ಸೇವೆಗಳಲ್ಲಿ ಸೇರಿಸಿಕೊಳ್ಳುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಘೋಷಿಸಿದೆ.
ಈ ಕುರಿತು ಸಚಿವಾಲಯವು ಟ್ವೀಟ್ ಮಾಡಿದ್ದು, 'ನಾಗರಿಕ ವಿಮಾನಯಾನವು ಹೆಚ್ಚು ನುರಿತ, ಶಿಸ್ತುಬದ್ಧ ಮತ್ತು ಪ್ರೇರಿತ ಅಗ್ನಿವೀರರನ್ನು ತನ್ನ ವಿವಿಧ ಸೇವೆಗಳಲ್ಲಿ ಸೇರಿಸಿಕೊಳ್ಳಲು ಎದುರು ನೋಡುತ್ತಿದೆ ಮತ್ತು ಅವರಿಗೆ ಹಾರಲು ರೆಕ್ಕೆಗಳನ್ನು ನೀಡುತ್ತದೆ' ಎಂದಿದೆ.
ಇನ್ನು ಕೇಂದ್ರ ಸರ್ಕಾರ ಮಂಗಳವಾರ ಅಗ್ನಿಪಥ ಯೋಜನೆಯನ್ನು ಘೋಷಿಸಿದ ಬಳಿಕ ದೇಶದ ವಿವಿಧ ರಾಜ್ಯದಲ್ಲಿ ಹಿಂಸಾತ್ಮಾಕ ಪ್ರತಿಭಟನೆಗಳು ನಡೆಯುತ್ತಿದೆ.