ಬೆಂಗಳೂರು, ಜೂ 18 (DaijiworldNews/HR): ನಟಿಯೊಬ್ಬರು ಚಿಕಿತ್ಸೆಗೆಂದು ಹೋಗಿದ್ದು, ಅಲ್ಲಿ ವೈದ್ಯರು ಮಾಡಿದ ಯಡವಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ.
ಈ ನಟಿಯ ಹೆಸರು ಸ್ವಾತಿ ಈಕೆ ಬೆಂಗಳೂರಿನ ಜೆಪಿ ನಗರದ ನಿವಾಸಿಯಾಗಿದ್ದು, ನಟ ವಿಜಯ ರಾಘವೇಂದ್ರ ಅವರ ಜೊತೆ ಎಫ್ಐಆರ್ 6 ಟು 6 ಸಿನಿಮಾದಲ್ಲಿ ನಟನೆ ಮಾಡಿದ್ದು ಜೊತೆಗೆ ಕೆಲವು ಸಿನಿಮಾಗಳಲ್ಲಿ ಸ್ವಾತಿ ಅಭಿನಯಿಸುತ್ತಿದ್ದರು.
ಇನ್ನು ಇಪ್ಪತ್ತು ದಿನಗಳ ಹಿಂದೆ ನಟಿ ಸ್ವಾತಿ ಅವರಿಗೆ ಹಲ್ಲು ನೋವು ಕಾಣಿಸಿಕೊಂಡಿತ್ತು ಚಿಕಿತ್ಸೆಗಾಗಿ ಓರಿಕ್ಸ್ ಡೆಂಟಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ದರು. ಆದರೆ ಇದೀಗ ಅದೇ ಆಸ್ಪತ್ರೆಯ ವೈದ್ಯರು ಈ ನಟಿಯ ಬಾಳಿಗೆ ವಿಲನ್ ಆಗಿದ್ದಾರೆ.
ಸ್ವಾತಿಗೆ ವೈದ್ಯರು ರೂಟ್ ಕೆನಾಲ್ ಚಿಕಿತ್ಸೆಯನ್ನು ಮಾಡಿದ್ದು, ರೂಟ್ ಕೆನಲ್ ಮಾಡಿದ ಮರುದಿನವೇ ನಟಿ ಸ್ವಾತಿ ಅವರ ಮುಖವೆಲ್ಲ ಊದಿಕೊಂಡು ವಿಕಾರ ರೂಪವನ್ನು ಪಡೆದುಕೊಂಡಿತು. ಇಪ್ಪತ್ತು ದಿನಗಳಾದರೂ ಸಹ ನಟಿ ಸ್ವಾತಿ ಮುಖ ಏನೂ ಬದಲಾವಣೆ ಕಾಣಿಸಲಿಲ್ಲ.
ಇನ್ನು ಸ್ವಾತಿ ಅವರಿಗೆ ಅನಸ್ತೇಶಿಯಾ ಇಂಜೆಕ್ಷನ್ ಕೊಡುವ ಬದಲು ಬೇರೆ ವಿಧವಾದ ಇಂಜೆಕ್ಷನ್ ಕೊಟ್ಟಿದ್ದಾರೆ. ಇದು ಸೈಡ್ ಎಫೆಕ್ಟ್ ಆಗಿ ನಟಿ ಸ್ವಾತಿ ಅವರ ಮುಖ ದಪ್ಪವಾಗಿ ಉಳಿದುಕೊಂಡಿದೆ. ಇದೀಗ ಡಾಕ್ಟರ್ ಗೆ ನಟಿ ಸ್ವಾತಿ ಕಾಲ್ ಮಾಡಿದರೆ ಡಾಕ್ಟರ್ ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ಸ್ವಾತಿ ಆರೋಪಿಸಿದ್ದಾರೆ.