ಹುಬ್ಬಳ್ಳಿ, ಜೂ 18 (DaijiworldNews/DB): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ್ ಯೋಜನೆಗೆ ನಾವು ವಿರೋಧ ವ್ಯಕ್ತಪಡಿಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಯೋಜನೆಯಡಿ ನಾಲ್ಕು ವರ್ಷಗಳವರೆಗೆ ಸೇನೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆದರೆ ಆ ಬಳಿಕ ಅವರ ಬದುಕಿನ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ಹಿಂಸಾತ್ಮಕ ಪ್ರತಿಭಟನೆಯನ್ನು ಯಾರೂ ಮಾಡಬಾರದು. ಯಾವುದೇ ಪ್ರತಿಭಟನೆಯಾದರೂ ಅದು ಶಾಂತಿಯುತವಾಗಿಯೇ ಇರಬೇಕು. ಆದರೆ ನೂತನ ಯೋಜನೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವವರೆಗೂ ಯಾರೂ ಪ್ರತಿಭಟನೆಯನ್ನು ನಿಲ್ಲಿಸಬಾರದು ಎಂದರು.