ಪುಲ್ವಾಮಾ, ಜೂ 18 (DaijiworldNews/MS): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಮನೆಯೊಳಗೆ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಹುತಾತ್ಮರಾಗಿರುವ ಸಬ್ ಇನ್ಸ್ಸ್ಪೆಕ್ಟರ್ ಫಾರೂಕ್ ಅಹಮ್ಮದ್ ಮಿರ್ ಎಂದು ಗುರುತಿಸಲಾಗಿದೆ.
ಶುಕ್ರವಾರ ಮತ್ತು ಶನಿವಾರದ ಮಧ್ಯರಾತ್ರಿ ಪಂಪೋರ್ ಪ್ರದೇಶದ ಸಂಬೂರಾದಲ್ಲಿ ಸಬ್ ಇನ್ಸ್ಪೆಕ್ಟರ್ ಫಾರೂಕ್ ಅಹ್ಮದ್ ಮಿರ್ ಮೇಲೆ ದಾಳಿ ನಡೆದಿದೆ.
ಮಿರ್ನನ್ನು ಸಿಟಿಸಿ ಲೆತ್ಪೋರಾದ ಐಆರ್ಪಿ 23ನೇ ಬೆಟಾಲಿಯನ್ನಲ್ಲಿ ನಿಯೋಜಿಸಲಾಗಿತ್ತು.
ಗಂಭೀರ ಗುಂಡು ತಗುಲಿ ಅವರು ಸಾವನ್ನಪ್ಪಿ ಹೃದಯದ ಬಳಿ ಗುಂಡುಗಳಂತಹ ಗುರುತುಗಳ ಒಂದು ಗಾಯ ಕಂಡುಬಂದಿದೆ. ನಾವು ತನಿಖೆ ಆರಂಭಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.