ಬಿಹಾರ, ಜೂ 17 (DaijiworldNews/HR): ಅಗ್ನಿಪಥ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದ್ದು, ಬಿಹಾರದ ದರ್ಭಾಂಗಾದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆದಿದ್ದರಿಂದ ಶಾಲಾ ಮಕ್ಕಳ ವಾಹನ ಸಿಲುಕಿ ಅದರಲ್ಲಿದ್ದ ಮಕ್ಕಳು ಕಣ್ಣೀರಾಗತ್ತಿದ್ದ ವಿಡಿಯೋವೊಂದು ವೈರಲ್ ಆಗಿದೆ.
ಬಸ್ ಒಳಗಿರುವ ಮಕ್ಕಳು ಭಯದಿಂದ ಕಣ್ಣೀರಾಕುತ್ತಿದ್ದು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ನಡುರಸ್ತೆಯಲ್ಲಿ ಸಿಲುಕಿಕೊಂಡಿದ್ದ ಬಸ್ ಅನ್ನು ಹೊರ ತಂದಿದ್ದಾರೆ ಎಂದು ವರದಿಯಾಗಿದೆ.
ಇನ್ನು 'ಅಗ್ನಿಪಥ್' ಯೋಜನೆಗೆ ಹಿಂಸಾತ್ಮಕ ಪ್ರತಿಭಟನೆಗಳು ಬಿಹಾರದಾದ್ಯಂತ ತೀವ್ರಗೊಂಡಿದ್ದು, ರೈಲು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ್ದು, ಭಾಗಲ್ಪುರ-ನವದೆಹಲಿ ವಿಕ್ರಮಶಿಲಾ ಎಕ್ಸ್ಪ್ರೆಸ್ ಮತ್ತು ಜಮ್ಮು ತಾವಿ-ಗುವಹಾಟಿ ಎಕ್ಸ್ಪ್ರೆಸ್ ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ.