ಶಿವಮೊಗ್ಗ, ಜೂ 17 (DaijiworldNews/HR): ಪರಸ್ಪರ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರು, ಮದುವೆ ಮಾಡಿಕೊಳ್ಳೋದಕ್ಕಾಗಿ ಜಾತಕ ತೋರಿಸಿದ ಸಂದರ್ಭದಲ್ಲಿ ಹುಡುಗಿಗೆ ಕುಜ ದೋಷವಿದೆ ಎನ್ನುವ ಕಾರಣಕ್ಕೆ, ಮದುವೆ ಆಗೋದಕ್ಕೆ ಪ್ರಿಯಕರ ನಿರಾಕರಿಸಿದ್ದು, ಇದರಿಂದ ಮನನೊಂದ ಮಹಿಳಾ ಕಾನ್ಸ್ ಟೇಬಲ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಸುಧಾ ಎಂಬುವರು ಸೇವೆ ಸಲ್ಲಿಸುತ್ತಿದ್ದು, ಸುಧಾ ಹಾಗೂ ಅರಣ್ಯ ಇಲಾಖೆಯ ಆರ್ ಎಫ್ಓ ಆಗಿ ಸೇವೆ ಸಲ್ಲಿಸುತ್ತಿರೋ ಪ್ರವೀಣ್ ಮೊಕಾಶಿ, ಪರಸ್ಪರ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಇನ್ನು ಯುವತಿಯ ಜಾತಕವನ್ನು ಮನೆಯವರಿಗೆ ಹುಡುಗ ನೀಡಿದ್ದು, ಯುವತಿಯ ಜಾತಕದಲ್ಲಿ ಕುಜದೋಷವಿದೆ ಎನ್ನುವ ಕಾರಣಕ್ಕೆ ಪ್ರವೀಣ್ ಮೊಕಾಶಿ ತಾಯಿ ಮದುವೆಗೆ ನಿರಾಕರಿಸಿದ್ದಾಳೆ. ಮನೆಯವರು ಸುಧಾ ಮದುವೆಗೆ ಒಪ್ಪದ ಕಾರಣ, ಪ್ರವೀಣ್ ಕೂಡ ಸುಧಾಳಿಂದ ದೂರವಾಗಿದ್ದಾನೆ.
ಪ್ರವೀಣ್ ಯಾವಾಗ ತನ್ನಿಂದ ದೂರವಾಗಿರುವುದಕ್ಕೆ ಯುವತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದು,ಮನೆಯವರು ಒಪ್ಪದ ಕಾರಣ, ಬಾ ಇಬ್ಬರು ವಿಷ ಕುಡಿದು ಸಾಯೋಣ ಎಂಬುದಾಗಿ ನಿರ್ಧರಿಸಿ, ಭದ್ರಾವತಿಯ ಎಪಿಎಂಸಿ ಹತ್ತಿರ ಬಂದು, ಮೊದಲು ಸುಧಾ ವಿಷ ಸೇವಿಸಿದ್ದು, ಇಬ್ಬರು ಮೆಗ್ಗಾನ್ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ.
ಇನ್ನು ತೀವ್ರವಾಗಿ ಅಸ್ವಸ್ಥಗೊಂಡಿದ್ದಂತ ಸುಧಾ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪ್ರವೀಣ್ ಒಂದು ವಾರ ಚಿಕಿತ್ಸೆ ಪಡೆದು, ಡಿಸ್ಚಾರ್ಜ್ ಆಗಿದ್ದಾನೆ ಎಂದು ವರದಿಯಾಗಿದೆ.