ನವದೆಹಲಿ, ಜೂ 17 (DaijiworldNews/HR): ಭಾರತೀಯ ವಾಯುಪಡೆಯಲ್ಲಿ 'ಅಗ್ನಿಪಥ್ ಯೋಜನೆ' ಅಡಿಯಲ್ಲಿ ಅಗ್ನಿವೀರರ ನೇಮಕಾತಿ ಜೂನ್ 24ರಿಂದ ಪ್ರಾರಂಭವಾಗಲಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಹೇಳಿದ್ದಾರೆ.
ವಿ.ಆರ್.ಚೌಧರಿ ಮಾತನಾಡಿ, 'ನೇಮಕಾತಿಗಾಗಿ ಗರಿಷ್ಠ ವಯೋಮಿತಿಯನ್ನ 23 ವರ್ಷಗಳಿಗೆ ಪರಿಷ್ಕರಿಸಲಾಗಿದ್ದು, ಇದರಿಂದ ಯುವಕರಿಗೆ ಅನುಕೂಲವಾಗಲಿದೆ. ಭಾರತೀಯ ವಾಯುಪಡೆಯ ನೇಮಕಾತಿ ಪ್ರಕ್ರಿಯೆ ಜೂನ್ 24 ರಿಂದ ಪ್ರಾರಂಭವಾಗಲಿದೆ' ಎಂದರು.
ಇನ್ನು ಅಗ್ನಿಪಥ್ ನೇಮಕಾತಿ ಯೋಜನೆಯ ವಿರುದ್ಧ ದೇಶಾದ್ಯಂತ ಯುವಕರು ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.