ಹೈದರಾಬಾದ್, ಜೂ 17 (DaijiworldNews/HR): ನಟಿ ಸಾಯಿ ಪಲ್ಲವಿ ಅವರು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಶ್ಮೀರಿ ಪಂಡಿತರ ಪಲಾಯನವನ್ನ ಗೋರಕ್ಷಣೆಯೊಂದಿಗೆ ಹೋಲಿಸಿ, ವಿವಾದಕ್ಕೆ ಗುರಿಯಾಗಿದ್ದು, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ನಟಿಯ ವಿರುದ್ಧ ಬಜರಂಗದಳ ವಿದ್ಯಾನಗರ ಜಿಲ್ಲಾ ಸಮಿಯೋಜಕ್ ದೂರು ನೀಡಿದ್ದು, ಹೈದರಾಬಾದ್ʼನಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ ಸಂಘಟನೆ, ಸುಲ್ತಾನ್ ಬಜಾರ್ ಪಿಎಸ್ʼನಲ್ಲಿ ಸಾಯಿ ಪಲ್ಲವಿ ವಿರುದ್ಧ ಬಲೋಪಸಮ ಕೇಂದ್ರ ಪ್ರಮುಖ್ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದೆ.