ಬೆಂಗಳೂರು, ಜೂ 17 (DaijiworldNews/HR): ಏಪ್ರಿಲ್ 28ರಂದು ಕಾಮಾಕ್ಷಿಪಾಳ್ಯದಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿಗೆ ಬೆಂಗಳೂರಿನ ಐವರು ಪೊಲೀಸರು ರಕ್ತದಾನ ಮಾಡಿದ್ದಾರೆ.
ಏಪ್ರಿಲ್ 28ರಂದು ಕಾಮಾಕ್ಷಿಪಾಳ್ಯದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿ ಮೇಲೆ ನಾಗೇಶ್ ಅಲಿಯಾಸ್ ನಾಗ ಎಂಬಾತ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದು, ದಾಳಿಗೆ ಒಳಗಾಗಿದ್ದಂತೆ ಸಂತ್ರಸ್ತೆಗೆ ಮೂರು ಸರ್ಜರಿ ನಡೆದಿದ್ದು, ಈ ವೇಳೆ ರಕ್ತದಾನ ಮಾಡಿದ್ದಾರೆ.
ಇನ್ನು ಪೊಲೀಸ್ ಇನ್ಸ್ ಪೆಕ್ಟರ್ ಎಂ.ಪ್ರಶಾಂತ್, ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರ್ ವಿಶ್ವನಾಥ್ ರೆಡ್ಡಿ, ಚಂದ್ರಯ್ಯ, ಮೋಹನ್ ಕುಮಾರ್ ಮತ್ತು ನಟರಾಜ್ ಅವರು ಗುರುವಾರ ರಕ್ತದಾನ ಮಾಡಿದ್ದಾರೆ.
ಪೊಲೀಸರು ರಕ್ತದಾನ ಮಾಡಿರೋದಕ್ಕೆ ಸೇಂಟ್ ಜಾನ್ಸ್ ಆಸ್ಪತ್ರೆ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಯುವತಿಗೆ ಇದುವರೆಗೂ ಮೂರು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.