ಬೆಂಗಳೂರು, ಜೂ16(DaijiworldNews/DB): ಕಾನೂನಿನ ಬಗ್ಗೆ ಯಾವಾಗಲು ಮಾತಾಡುವ, ಕಾನೂನಿಗಾಗಿ ಹೋರಾಡುವ ಕಾಂಗ್ರೆಸ್ ನವರು ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ಸೋನಿಯಾ ಮತ್ತು ರಾಹುಲ್ ಗಾಂಧಿ ಕಾನೂನಿಗಿಂತ ಅತೀತರೇ? ಒಂದು ವೇಳೆ ಹೌದಾದಲ್ಲಿ ಸಂವಿಧಾನದ ಯಾವ ಸೆಕ್ಷನ್ ಅಡಿಯಲ್ಲಿ ಅವರಿಗೆ ಅಂತಹ ಪ್ರಾತಿನಿಧ್ಯ ನೀಡಲಾಗಿದೆ? ಅಸೋಸಿಯೇಷನ್ ಜರ್ನಲ್ ನಲ್ಲಿ ಮೂಲ ಷೇರುದಾರರು ಎಷ್ಟು ಮಂದಿ ಇದ್ದಾರೆ? ಯಂಗ್ ಇಂಡಿಯಾದಲ್ಲಿರುವ ಒಟ್ಟು ಪಾಲುದಾರರ ಸಂಖ್ಯೆ ಎಷ್ಟು ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರೈವೆಟ್ ಕಂಪೆನಿಗೆ ವರ್ಗಾವಣೆ ಮಾಡಲು ಕಾನೂನಿನಲ್ಲಿ ಅಧಿಕಾರ ಇದೆಯೇ? ಕಂಪೆನಿಯೊಂದರಿಂದ ಇನ್ನೊಂದಕ್ಕೆ ವರ್ಗಾಯಿಸುವಾಗ ಎಜೆಎಲ್ ಕಂಪೆನಿಯ ಸಾಲ ಎಷ್ಟಿತ್ತು? ಎಂದೂ ಸಿ.ಟಿ. ರವಿ ಪ್ರಶ್ನೆ ಮಾಡಿದ್ದಾರೆ.
ಈ ಎಲ್ಲಾ ಪ್ರಶ್ನೆಗಳಿಗೆ ಶೀಘ್ರ ಕಾಂಗ್ರೆಸ್ ನಾಯಕರು ಉತ್ತರಿಸಲಿ ಎಂದಿದ್ದಾರೆ.