ಬೆಂಗಳೂರು, ಜೂ 16 (DaijiworldNews/MS) : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿರುವ ಕರ್ನಾಟಕ ಅಮಿತ್ ಶಾ ಪ್ರಕರಣದ ಇಡಿ ತನಿಖೆ ಯಾವಾಗ ಶುರುವಾಗುತ್ತದೆ? ಎಂದು ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್, " ಅವ್ಯವಹಾರವೇ ನಡೆಯದೆ ಇರುವ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ಸುಳ್ಳನ್ನು ಹಂಚುತ್ತಿರುವ ಬಿಜೆಪಿ ಇದಕ್ಕೆ ಉತ್ತರಿಸುವುದೇ ಎಂದು ಹೇಳಿ, ಡಿಮಾನಿಟೈಸೇಷನ್ ಸಮಯದಲ್ಲಿ ಅಮಿತ್ ಶಾ ಅಧ್ಯಕ್ಷತೆಯ ಅಹಮದಾಬಾದ್ ಕೋ ಆಪರೇಟಿವ್ ಬ್ಯಾಂಕ್ನಲ್ಲಿ 745 ಕೋಟಿ ರೂ ಗಳ ವ್ಯವಹಾರ ನಡೆಯುತ್ತದೆ . ಡಿಮಾನಿಟೈಸೇಷನ್ ಸಮಯದಲ್ಲಿ ಅಷ್ಟೊಂದು ಮೊತ್ತದ ಹಣ ಎಲ್ಲಿಂದ ಬಂತು? ಅಮಿತ್ ಶಾ ಪ್ರಕರಣದ ಇಡಿ ತನಿಖೆ ಯಾವಾಗ ಶುರುವಾಗುತ್ತದೆ? ಎಂದು ಪ್ರಶ್ನಿಸಿದೆ.
ಹಿಮಂತ್ ಬಿಸ್ವಾಸ್ ಶರ್ಮಾ ಅವರ ಮೇಲೆ ದಿನಂಪ್ರತಿ ಆರೋಪ ಮಾಡುತ್ತಿದ್ದವರು ಅವರು ಬಿಜೆಪಿ ಸೇರಿದೊಡನೆ ವಾಷಿಂಗ್ ಮಷಿನ್ ಅಲ್ಲಿ ತೊಳೆದು ಶುಚಿರ್ಭೂತವಾಗಿ ನಿಲ್ಲಿಸಿದ್ದಾರೆ. ಅವರ ವಿರುದ್ಧದ ಇಡಿ ಪ್ರಕರಣ ಏನಾಗಿದೆ? ಅವರ ವಿರುದ್ಧ ಯಾಕೆ ವಿಚಾರಣೆ ನಡೆಯುತ್ತಿಲ್ಲ ಎಂದು ಹೇಳಬಲ್ಲರೇ? ಎಂದು ಕೇಳಿದೆ
ರೋಧ ಪಕ್ಷದಲ್ಲಿದ್ದಾಗ ಇಡಿ ಹೆಸರಲ್ಲಿ ನಿತ್ಯಕಿರುಕುಳ ಅನುಭವಿಸುತ್ತಿದ್ದ ನಾರಾಯಣ ರಾಣೆ,ಮುಕುಲ್ ರಾಯ್ ಅಂಥವರು ಬಿಜೆಪಿ ಸೇರಿದೊಡನೆ ಪರಮಪಾವನರಾಗುತ್ತಾರೆ. ಅವರ ವಿರುದ್ಧದ ಇಡಿ ಪ್ರಕರಣಗಳೆಲ್ಲ ಧೂಳು ಹಿಡಿಯುತ್ತವೆ . ಇದು ಬಿಜೆಪಿಯ ಅಸಲಿ ಮನಸ್ಥಿತಿ. 'ನ್ಯಾಷನಲ್ ಹೆರಾಲ್ಡ್' ಬಿಜೆಪಿಯ ದ್ವೇಷ ರಾಜಕಾರಣದ ಫಲವೇ ಹೊರತು ಅದರಲ್ಲಿ ಸತ್ಯವಿಲ್ಲ ಎಂದು ಕಿಡಿಕಾರಿದೆ.