ಬೆಂಗಳೂರು, ಜೂ16(DaijiworldNews/DB): ಇಡಿ ವಿರುದ್ದ ಪ್ರತಿಭಟನೆಗಿಳಿದ ಕಾಂಗ್ರೆಸ್ ನಾಯಕರು ಗುಲಾಮಿತನದ ಅನಾವರಣ ಮಾಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವರ್ತನೆಯಿಂದಾಗು ಜನರಿಗೊಂದು, ಕಾಂಗ್ರೆಸ್ಸಿಗರಿಗೊಂದು ಕಾನೂನು ದೇಶದಲ್ಲಿ ಇದೆಯೇ? ಸಂವಿಧಾನ ಇವರಿಗೆ ಬೇರೆಯೇ ಎಂದು ಜನ ಪ್ರಶ್ನಿಸುವಂತಾಗಿದೆ. ಗುಲಾಮಿತನದ ಅನಾವರಣವನ್ನು ಅವರು ಪ್ರತಿಭಟನೆ ಮೂಲಕ ಮಾಡಿದ್ದಾರೆ ಎಂದರು.
130 ವರ್ಷಗಳ ಇಇಹಾಸ ಆ ಪಕ್ಷಕ್ಕಿದೆ. ಅಷ್ಟು ಸುದೀರ್ಘ ಇತಿಹಾಸ ಹೊಂದಿರುವ ಪಕ್ಷದ ನಾಯಕರಿಗೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದರು.
ಕೊರೊನಾ ಬೆಂಗಳೂರಿನಲ್ಲಿ ಹೆಚ್ಚುತ್ತಿದ್ದು, ಎರಡು ಶಾಲೆಗಳಲ್ಲಿ ಜಾಸ್ತಿಯಾಗಿರುವ ಮಾಹಿತಿ ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಜನ ಸೇರಿಸಿಕೊಂಡು ಪ್ರತಿಭಟನೆ ಮಾಡುವುದು ಅಪಾಯವನ್ನೇ ಆಹ್ವಾನಿಸಿಕೊಂಡಂತೆ ಎಂಬುದುನ್ನು ಕಾಂಗ್ರೆಸ್ ನಾಯಕರು ತಿಳಿದುಕೊಳ್ಳಬೇಕು ಎಂದವರು ಇದೇ ವೇಳೆ ತಿಳಿಸಿದರು.